ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಂಡವು ಅಮೆರಿಕದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದೆ.

ಬುಧವಾರ ರಾತ್ರಿ ನಡೆದ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಭಾರತದ ಯುವ ಆಟಗಾರರು 4–1ರಿಂದ ಜರ್ಮನಿಯ ಆಟಗಾರರನ್ನು ಮಣಿಸಿ, ಮುಂದಿನ ಸುತ್ತು ಪ್ರವೇಶಿಸಿದರು.

ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ರೆಡ್ಡಿ ಕೆ. ಮತ್ತು ವೈಷ್ಣವಿ ಖಡ್ಕೇಕರ್ ಅವರು 21-13, 23-21 ರಿಂದ ಜರ್ಮನಿಯ ಡೇವಿಡ್ ಎಕರ್ಲಿನ್ ಮತ್ತು ಅಮೆಲಿ ಲೆಹ್ಮನ್ ಅವರನ್ನು ಮಣಿಸಿದರು.

ಬಾಲಕರ ಸಿಂಗಲ್ಸ್‌ನಲ್ಲಿ ಆಯುಷ್ ಶೆಟ್ಟಿ 21-12, 21-7ರಿಂದ ಲೂಯಿಸ್ ಪೊಂಗ್ರಾಟ್ಜ್ ವಿರುದ್ಧ ಸುಲಭ ಗೆಲುವು ದಾಖಲಿಸಿದರೆ, ಬಾಲಕಿಯರ ಸಿಂಗಲ್ಸ್‌ನಲ್ಲಿ ಉನ್ನತಿ ಹೂಡಾ 21-12, 21-11 ರಿಂದ ಸೆಲಿನ್ ಹಬ್ಸ್‌ಚ್ ಅವರನ್ನು ಹಿಮ್ಮೆಟ್ಟಿಸಿದರು.

ಬಾಲಕಿಯರ ಡಬಲ್ಸ್‌ನಲ್ಲಿ ವೆನ್ನಾಲ ಕಲಗೋಟ್ಲ ಮತ್ತು ಶ್ರೀಯಾಂಶಿ ವಾಲಿಶೆಟ್ಟಿ ಜೋಡಿಯು 21-15, 21-18 ರಿಂದ ಅಮೆಲಿ ಲೆಹ್ಮನ್ ಮತ್ತು ಕಾರಾ ಸೀಬ್ರೆಕ್ಟ್ ಜೋಡಿಯನ್ನು ಸದೆಬಡಿದರು. ಆದರೆ, ಬಾಲಕರ ಡಬಲ್ಸ್‌ನಲ್ಲಿ ಭಾರತದ ಜೋಡಿಯು ಮುಗ್ಗರಿಸಿತು. ದಿವ್ಯಂ ಅರೋರಾ ಮತ್ತು ನಿಕೋಲಸ್ ರಾಜ್ 18-21, 21-18, 18-21 ರಿಂದ ಡೇವಿಡ್ ಎಕರ್ಲಿನ್ ಮತ್ತು ಸೈಮನ್ ಕ್ರಾಕ್ಸ್ ಅವರಿಗೆ ಮಣಿದರು.

‘ಡಿ’ ಗುಂಪಿನಲ್ಲಿರುವ ಭಾರತವು ಮೊದಲ ಪಂದ್ಯದಲ್ಲಿ ಕುಕ್ ಐಲ್ಯಾಂಡ್ಸ್ ತಂಡವನ್ನು, ಎರಡನೇ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಮಣಿಸಿತ್ತು.

ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಎಂಟರ ಘಟ್ಟಕ್ಕೆ ಪ್ರವೇಶಿಸಿರುವ ಭಾರತ, ಮುಂದಿನ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.