ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಪೇಸ್‌ ನಾಮನಿರ್ದೇಶನ

Published 26 ಸೆಪ್ಟೆಂಬರ್ 2023, 20:43 IST
Last Updated 26 ಸೆಪ್ಟೆಂಬರ್ 2023, 20:43 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ಇಂಟರ್‌ನ್ಯಾಷನಲ್ ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಆಟಗಾರರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಏಷ್ಯದ ಮೊದಲಿಗ ಎನಿಸಿದರು.

50 ವರ್ಷದ ಪೇಸ್‌ ಅವರು 2024ನೇ ಸಾಲಿಗೆ ಈ ವಿಭಾಗದಲ್ಲಿ ಮಂಗಳವಾರ ನಾಮನಿರ್ದೇಶಿತ ಆರು ಮಂದಿಯಲ್ಲಿ ಒಬ್ಬರಾಗಿದ್ದಾರೆ. ಅವರು ಕಾರಾ ಬ್ಲ್ಯಾಕ್, ಅನಾ ಇವಾನೊವಿಕ್, ಕಾರ್ಲೋಸ್ ಮೋಯಾ, ಡೇನಿಯಲ್ ನೆಸ್ಟರ್ ಮತ್ತು ಫ್ಲಾವಿಯಾ ಪೆನೆಟ್ರಾ ಜೊತೆ ಪೈಪೋಟಿ ನಡೆಸಲಿದ್ದಾರೆ.

ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಟೂರ್ನಿಗಳಲ್ಲಿ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿದ್ದ ಚೀನಾದ ಲೀ ನಾ ಅವರು 2019 ರಲ್ಲಿ ಹಾಲ್ ಆಫ್‌ ಫೇಮ್‌ಗೆ ನಾಮನಿರ್ದೇಶನಗೊಂಡ ಏಷ್ಯದ ಮೊದಲ ಆಟಗಾರ್ತಿ ಎನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT