ಸೋಮವಾರ, ನವೆಂಬರ್ 18, 2019
27 °C

ಎಟಿಪಿ ಫೈನಲ್ಸ್‌ ಟೂರ್ನಿ: ಕಣಕ್ಕೆ ನಡಾಲ್‌

Published:
Updated:
Prajavani

ಮ್ಯಾಡ್ರಿಡ್‌: ಕಿಬ್ಬೊಟ್ಟೆ ನೋವಿನ ನಡುವೆಯೂ ಎಟಿಪಿ ಫೈನಲ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯುವುದಾಗಿ ರಫೆಲ್‌ ನಡಾಲ್‌ ಹೇಳಿದ್ದಾರೆ. ನೋವಿನ ಕಾರಣ ಅವರು ಪ್ಯಾರಿಸ್‌ ಮಾಸ್ಟರ್ಸ್ ಟೂರ್ನಿಯ ಸೆಮಿಫೈನಲ್‌ ಹಂತದಲ್ಲಿ ಹಿಂದೆ ಸರಿದಿದ್ದರು.

‘ಮಲ್ಲೊರ್ಕಾದಲ್ಲಿ ಸ್ಕ್ಯಾನ್‌ಗೆ ಒಳಗಾಗಿದ್ದು, ಕಿಬ್ಬೊಟ್ಟೆಯ ಬಲಭಾಗದಲ್ಲಿ ಸ್ವಲ್ಪ ನೋವಿದ್ದರೂ ಎಟಿಪಿ ಫೈನಲ್ಸ್‌ ಆಡಲು ಲಂಡನ್‌ಗೆ ತೆರಳುತ್ತೇನೆ’ ಎಂದು ಅವರು ಮಂಗಳವಾರ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಡೆನಿಸ್‌ ಶಪವಲೊವ್‌ ಎದುರಿನ ಸೆಮಿಫೈನಲ್‌ ಪಂದ್ಯದಿಂದ ಅವರು ಹಿಂದೆ ಸರಿದಿದ್ದರು. ಆದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟವನ್ನು ಮರಳಿ ಪಡೆಯುವಲ್ಲಿ ಸೋಮವಾರ ಯಶಸ್ವಿಯಾಗಿದ್ದರು.

ನವೆಂಬರ್‌ 10ರಿಂದ 17ರವರೆಗೆ ಎಟಿಪಿ ಫೈನಲ್ಸ್‌ ನಡೆಯಲಿದೆ. ನಡಾಲ್‌ ಒಂದು ಬಾರಿಯೂ ಈ ಪ್ರಶಸ್ತಿ ಗೆದ್ದಿಲ್ಲ.

ಪ್ರತಿಕ್ರಿಯಿಸಿ (+)