ಮುಂಬೈ: ಶ್ರೀರಾಮ್ ಬಾಲಾಜಿ ಮತ್ತು ಋತ್ವಿಕ್ ಬೊಲ್ಲಿಪಲ್ಲಿ ಅವರು ಗುರುವಾರ ನಡೆದ ಟೆನಿಸ್ ಪ್ರೀಮಿಯರ್ ಲೀಗ್ (ಟಿಪಿಎಲ್) ಹರಾಜು ಪ್ರಕ್ರಿಯೆ ಯಲ್ಲಿ ತಲಾ ₹12 ಲಕ್ಷ ಮೌಲ್ಯ ಗಳಿಸಿದರು. ಕ್ರಮವಾಗಿ ಗುಡಗಾಂವ್ ಗ್ರ್ಯಾಂಡ್ ಸ್ಲ್ಯಾಮರ್ಸ್ ಮತ್ತು ಚೆನ್ನೈ ಸ್ಮ್ಯಾಷರ್ಸ್ ತಂಡಗಳಿಗೆ ಸೇರ್ಪಡೆಯಾದರು. ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೌಲ್ಯ ಪಡೆದ ಆಟಗಾರರಾದರು.

ಅಹಮದಾಬಾದಿನಲ್ಲಿ ಡಿಸೆಂಬರ್ 9 ರಿಂದ 14ರವರೆಗೆ ಟಿಪಿಎಲ್ ನಡೆಯಲಿದೆ.

ಕರ್ನಾಟಕದ ರೋಹನ್ ಬೋಪಣ್ಣ ನಾಯಕತ್ವದ ಎಸ್.ಜಿ. ಪೈಪರ್ಸ್ ಬೆಂಗಳೂರು ತಂಡವು ಸ್ಟಾರ್ ಆಟಗಾರ್ತಿ ಶ್ರೀವಲ್ಲಿ ಬಮಿಡಿಪಾಟಿ ಅವರನ್ನು ಸೇರ್ಪಡೆ ಮಾಡಿಕೊಂಡಿತು. ಈಚೆಗೆ ನಡೆದ ಬಿಲ್ಲಿ ಜೀನ್ ಕಿಂಗ್ ಕಪ್ (ಏಷ್ಯಾ/ಒಸಿನಿಯಾ) ಒಂದನೇ ಗುಂಪಿನಲ್ಲಿ ಶ್ರೀವಲ್ಲಿ ಪ್ರಶಸ್ತಿ ಜಯಿಸಿದ್ದರು.

‘ರೋಹನ್ ಬೋಪಣ್ಣ, ಶ್ರೀವಲ್ಲಿ ಮತ್ತು ರಾಮಕುಮಾರ್ ರಾಮನಾಥನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಸಂತೋಷವಾಗಿದೆ. ಟೆನಿಸ್ನ ಉನ್ನತ ದರ್ಜೆಯ ಆಟಗಾರರು ಇರುವ ತಂಡ ನಮ್ಮದು’ ಎಂದು ಎಸ್.ಜಿ. ಪೈಪರ್ಸ್ ತಂಡದ ಮಾಲೀಕತ್ವ ಹೊಂದಿರುವ ಎಸ್ ಗುಪ್ತಾ ಸ್ಪೋರ್ಟ್ಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಭೂಪತಿ ಹೇಳಿದ್ದಾರೆ.

ಬೆಂಗಳೂರು ತಂಡವು ಶ್ರೀವಲ್ಲಿ ಅವರಿಗೆ ₹ 8.60 ಲಕ್ಷ ಹಾಗೂ ರಾಮಕುಮಾರ್ ಅವರಿಗೆ ₹ 7.20 ಲಕ್ಷ ನೀಡಿ ಖರೀದಿಸಿತು. ಹಾಲಿ ಚಾಂಪಿಯನ್ ಹೈದರಾಬಾದ್ ಸ್ಟ್ರೈಕರ್ಸ್ ತಂಡವು ಆರ್ಥರ್ ರಿಂಡರ್ಕನೆಚ್ ನಾಯಕತ್ವ ಹೊಂದಿದೆ. ಫ್ರಾನ್ಸ್ನ ಕ್ಯಾರೊಲ್ ಮಾನೆಟ್ (₹10.60ಲಕ್ಷ) ಮತ್ತು ವಿಷ್ಣುವರ್ಧನ್ (₹6 ಲಕ್ಷ) ಅವರನ್ನು ಖರೀದಿಸಿತು. ಟೂರ್ನಿಯಲ್ಲಿ ರಾಜಸ್ಥಾನ ರೇಂಜರ್ಸ್, ಗುಜರಾತ್ ಪ್ಯಾಂಥರ್ಸ್, ಜಿ.ಎಸ್. ಡೆಲ್ಲಿ ಏಸಸ್, ಗುಡಗಾಂವ್ ಗ್ರ್ಯಾಂಡ್ ಸ್ಲ್ಯಾಮರ್ಸ್, ಯಶ್ ಮುಂಬೈ ಈಗಲ್ಸ್, ಚೆನ್ನೈ ಸ್ಮ್ಯಾಷರ್ಸ್, ಎಸ್.ಜಿ.ಪೈಪರ್ಸ್ ಬೆಂಗಳೂರು ಹಾಗೂ ಹೈದರಾಬಾದ್ ಸ್ಟ್ರೈಕರ್ ತಂಡಗಳು ಆಡಲಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.