ಹೋಬರ್ಟ್: ಭಾರತದ ಸಾನಿಯಾ ಮಿರ್ಜಾ ಹಾಗೂಉಕ್ರೇನ್‌ನ ನಾದಿಯಾ ಕಿಚೆನೊಕ್ ಜೋಡಿಯು ಹೋಬರ್ಟ್ ಅಂತರಾಷ್ಟ್ರೀಯ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದೆ. ಎರಡು ವರ್ಷಗಳ ದೀರ್ಘ ವಿಶ್ರಾಂತಿ ಬಳಿಕ ಅವರುಟೆನಿಸ್‌ಗೆ ಮರಳಿರುವ ಸಾನಿಯಾ ಗೆಲುವಿನ ಓಟ ಮುಂದುವರಿಸಿದ್ದಾರೆ.

ಒಂದು ಗಂಟೆ 24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ–ಕಿಚೆನೋಕ್ ಜೋಡಿ ಸ್ಲೊವೇನಿಯಾದ ತಮಾರ ಜಿಡಾನ್ಸೆಕ್ ಮತ್ತು ಜೆಕ್ ಗಣರಾಜ್ಯದ ಮರೀ ಬುಸ್ಕೋವ ವಿರುದ್ಧ 7–6, 6–2 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು.

ಐದನೇ ಕ್ರಮಾಂಕದಲ್ಲಿರುವ ಸಾನಿಯಾ ಜೋಡಿ ಫೈನಲ್‌ನಲ್ಲಿ ಚೀನಾದ ಶುಯಿ ಪೆಂಗ್ ಮತ್ತು ಶುಯಿ ಜಾಂಗ್ ಜೋಡಿಯನ್ನು ಎದುರಿಸಲಿದೆ. ಎರಡನೇ ಕ್ರಮಾಂಕದಲ್ಲಿರುವಚೀನಾದ ಈ ಜೋಡಿ ಸೆಮಿಫೈನಲ್‌ನಲ್ಲಿ ಆಡದೆ ಫೈನಲ್‌ಗೆ ನೇರ ಅರ್ಹತೆ ಪಡೆದಿದೆ.

ಶುಯಿ ಜೋಡಿ ವಿರುದ್ಧ ಕಣಕ್ಕಿಳಿಯಬೇಕಿದ್ದಬೆಲ್ಜಿಯಂನ ಕ್ರಿಸ್ಟಿನಾ ಪ್ಲಿಪ್‌ಕೆನ್ಸ್ ಹಾಗೂ ಅಲಿಸನ್ ವಾನ್ ಉತ್ವೆನ್‌ಕ್ ಜೋಡಿ ಗಾಯದ ಸಮಸ್ಯೆಯಿಂದ ಸ್ಪರ್ಧೆಯಿಂದ ಹಿಂದೆ ಸರಿದಿತ್ತು.

33 ವರ್ಷದ ಸಾನಿಯಾ ಎರಡು ವರ್ಷಗಳ ನಂತರ ಡಬ್ಲ್ಯುಟಿಎ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಅಕ್ತರ್ ಅವರನ್ನು ವಿವಾಹವಾಗಿರುವ ಸಾನಿಯಾ ಗರ್ಭಿಣಿಯಾದ ನಂತರ 2018ರಲ್ಲಿ ಟೆನಿಸ್ ಅಂಗಣದಿಂದ ದೂರ ಉಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.