ಟೆನಿಸ್‌: ಪ್ರತಿಭಾ, ಭರತ್‌ಗೆ ಪ್ರಶಸ್ತಿ

7

ಟೆನಿಸ್‌: ಪ್ರತಿಭಾ, ಭರತ್‌ಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಕರ್ನಾಟಕ ಪ್ರತಿಭಾ ಪ್ರಸಾದ್‌ ಹಾಗೂ ತಮಿಳುನಾಡಿನ ಭರತ್‌ ಎನ್‌. ಕುಮಾರ್‌, ಎಎನ್‌ಟಿ–ಎಐಟಿಎ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. 

ಶುಕ್ರವಾರ ನಡೆದ ಬಾಲಕಿಯರ ಫೈನಲ್‌ ಪಂದ್ಯದಲ್ಲಿ ಪ್ರತಿಭಾ, 7–6(1), 6–3ರಿಂದ ಕರ್ನಾಟಕದವರೇ ಆದ ವಂಶಿತಾ ಪಠಾಣಿಯಾ ಅವರನ್ನು ಮಣಿಸಿದರು. ಪಂದ್ಯದ ಆರಂಭದಿಂದಲೇ ಇಬ್ಬರೂ ಪ್ರಬಲ ಪೈಪೋಟಿ ನಡೆಸಿದರು. ಮೊದಲ ಸೆಟ್‌ನ ಟೈ ಬ್ರೇಕರ್‌ನಲ್ಲಿ ಎದುರಾಳಿಯನ್ನು ಪ್ರತಿಭಾ ಮಣಿಸಿದರು. ಎರಡನೇ ಸೆಟ್‌ನಲ್ಲಿ ಸುಲಭವಾಗಿ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದರು.

ಬಾಲಕರ ಸಿಂಗಲ್ಸ್‌ನಲ್ಲಿ ಭರತ್‌ 7–5, 6–0ಯಿಂದ ಆಂಧ್ರ‍ಪ್ರದೇಶದ ನಿಖಿತ್‌ ಅವರನ್ನು ಮಣಿಸಿದರು. ಈ ಪಂದ್ಯದಲ್ಲೂ ಮೊದಲ ಸೆಟ್‌ ಪ್ರಬಲ ಪೈಪೋಟಿಯಿಂದ ಕೂಡಿತ್ತು. ಟೈ ಬ್ರೇಕರ್‌ನಲ್ಲಿ ಭರತ್‌ ಗೆದ್ದರು. ಎರಡನೇ ಸೆಟ್‌ನಲ್ಲಿ ಸ್ವಯಂ ತಪ್ಪುಗಳನ್ನು ಎಸಗಿದ ನಿಖಿತ್‌ ನಿರಾಸೆಗೆ ಒಳಗಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !