ಟೆನಿಸ್‌: ನಿನಾದ್‌ ರನ್ನರ್‌ ಅಪ್

ಗುರುವಾರ , ಜೂಲೈ 18, 2019
26 °C

ಟೆನಿಸ್‌: ನಿನಾದ್‌ ರನ್ನರ್‌ ಅಪ್

Published:
Updated:
Prajavani

ಬೆಂಗಳೂರು: ಕರ್ನಾಟಕದ ನಿನಾದ್‌ ರವಿ, ಪಂಜಾಬ್‌ನ ಜಲಂದರ್‌ನಲ್ಲಿ ಆಯೋಜನೆಯಾಗಿದ್ದ ಎಐಟಿಎ 18 ವರ್ಷದೊಳಗಿನವರ ಸಿಎಸ್‌ 7 ಟೆನಿಸ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದಾರೆ.

ಸಿಂಗಾ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಬೆಂಗಳೂರಿನ ನಿನಾದ್‌ 3–6, 1–6 ನೇರ ಸೆಟ್‌ಗಳಿಂದ ಉತ್ತರ ಪ್ರದೇಶದ ಎ.ದಿವ್ಯಾಂಶ್‌ ಎದುರು ಸೋತರು.

ಸೌತ್‌ಎಂಡ್‌ ವೃತ್ತದಲ್ಲಿರುವ ಸುರಾನ ಕಾಲೇಜಿನ ವಿದ್ಯಾರ್ಥಿಯಾಗಿರುವ ನಿನಾದ್‌, ಮೊದಲ ಸೆಟ್‌ನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಆದರೆ ಎರಡನೇ ಸೆಟ್‌ನಲ್ಲಿ ಕಿಂಚಿತ್ತೂ ಹೋರಾಟ ತೋರದೆ ಸೋಲೊಪ್ಪಿಕೊಂಡರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !