ಶನಿವಾರ, ಜುಲೈ 24, 2021
27 °C

ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದ ಆ್ಯಶ್ಲಿ ಬಾರ್ಟಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಂಡನ್‌: ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ವಿಂಬಲ್ಡನ್ ಟೂರ್ನಿಯ ಮೊದಲ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಮಿಂದರು. ಶನಿವಾರ ರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ ಅವರು ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವ ಎದುರು 6-3, 6-7(4/7), 6-3ರಲ್ಲಿ ಗೆಲುವು ಸಾಧಿಸಿದರು.

2012ರಲ್ಲಿ ಪೋಲೆಂಡ್‌ನ ಅನೀಸ್ಕ ರಾಡ್ವಂಸ್ಕ ವಿರುದ್ಧ ಅಮೆರಿಕದ ಸೆರೆನಾ ವಿಲಿಯಮ್ಸ್ ಗೆದ್ದ ನಂತರ ವಿಂಬಲ್ಡನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಇದೇ ಮೊದಲ ಬಾರಿ ಮೂರು ಸೆಟ್‌ಗಳ ಹೋರಾಟ ಕಂಡಿತು. ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ 25 ವರ್ಷ ವಯಸ್ಸಿನ ಬಾರ್ಟಿ 41 ವರ್ಷಗಳ ನಂತರ ವಿಂಬಲ್ಡನ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮೊದಲ ಮಹಿಳೆ ಎಂಬ ಖ್ಯಾತಿಯನ್ನೂ ಗಳಿಸಿದರು.

ಇದು, ಪ್ಲಿಸ್ಕೋವ ಎದುರು ಬಾರ್ಟಿಗೆ ಒಲಿದ ಐದನೇ ಜಯವಾಗಿದೆ. ಒಟ್ಟು ಏಳು ಬಾರಿ ಇಬ್ಬರೂ ಮುಖಾಮುಖಿಯಾಗಿದ್ದಾರೆ.

ಮೊದಲ ಸೆಟ್‌ನಲ್ಲಿ 4–0ರಲ್ಲಿ ಮುನ್ನಡೆದ ಬಾರ್ಟಿ ಚೆಂಡನ್ನು ಮೋಹಕವಾಗಿ ಡ್ರಾಪ್ ಮಾಡುತ್ತ, ಬಲಶಾಲಿ ಹೊಡೆತಗಳ ಮೂಲಕ ಮಿಂಚಿದರು. ಎರಡನೇ ಸೆಟ್‌ನಲ್ಲಿ ಬಾರ್ಟಿ 3–1ರ ಮುನ್ನಡೆ ಸಾಧಿಸಿದ್ದಾಗ ತಿರುಗೇಟು ನೀಡಿದ ಪ್ಲಿಸ್ಕೋವ 3–3ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ನಂತರ ಸೆಟ್‌ ಅನ್ನು ಟೈ ಬ್ರೇಕರ್‌ ವರೆಗೆ ಕೊಂಡೊಯ್ದು ಜಯ ಸಾಧಿಸಿದರು. ನಿರ್ಣಾಯಕ ಮೂರನೇ ಸೆಟ್‌ನ ಆರಂಭದಲ್ಲೇ 3–0 ಮುನ್ನಡೆ ಸಾಧಿಸಿದ ಬಾರ್ಟಿ ನಂತರ ನಿರಾಯಾಸವಾಗಿ ಮುನ್ನಡೆದು ಸೆಟ್ ಹಾಗೂ ಪಂದ್ಯ ಗೆದ್ದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು