ಯುದ್ಧಬಾಧಿತ ಮಕ್ಕಳಿಗಾಗಿ ಚಾರಿಟಿ ಟೂರ್ನಿ: ಇಗಾ ಸ್ವೆಟೆಕ್

ವಿಂಬಲ್ಡನ್: ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಪೋಲೆಂಡ್ ಟೆನಿಸ್ ಆಟಗಾರ್ತಿ ಇಗಾ ಸ್ವೆಟೆಕ್ ಅವರು ಉಕ್ರೇನ್ನಲ್ಲಿ ಯದ್ಧದಿಂದ ಬಾಧಿತ ಮಕ್ಕಳಿಗಾಗಿ ನಿಧಿ ಸಂಗ್ರಹಿಸಲು ಚಾರಿಟಿ ಟೂರ್ನಿ ಆಯೋಜಿಸುವುದಾಗಿ ತಿಳಿಸಿದ್ದಾರೆ.
ಜುಲೈ 23ರಂದು ಪೋಲೆಂಡ್ನ ಕ್ರಾಕೊವ್ನಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಟೂರ್ನಿ ನಡೆಯಲಿದೆ. ಉಕ್ರೇನ್ನ ಫುಟ್ಬಾಲ್ ದಿಗ್ಗಜ ಆ್ಯಂಡ್ರಿ ಸೆವಚೆಂಕೊ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
‘ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೊಲಿನಾ ಈ ಟೂರ್ನಿಯ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಟೂರ್ನಿಯಿಂದ ಸಂಗ್ರಹವಾಗುವ ಹಣದಿಂದ ಯುದ್ಧದಿಂದ ಬಾಧಿತ ರಾಗಿರುವ ಮಕ್ಕಳು ಮತ್ತು ಯುವಕ/ ಯುವತಿಯರಿಗೆ ನೆರವು ನೀಡಲಾ ಗುತ್ತದೆ‘ ಎಂದು ಸ್ವೆಟೆಕ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.