ಸಿಎಸ್7 ಟೆನಿಸ್ ಟೂರ್ನಿ: ನಾಲ್ಕರ ಘಟ್ಟಕ್ಕೆ ರಿತಿಕಾ, ಚನ್ನಮಲ್ಲಿಕಾರ್ಜುನ

ಬೆಂಗಳೂರು: ಜಯದ ಓಟ ಮುಂದುವರಿಸಿದ ಚನ್ನಮಲ್ಲಿಕಾರ್ಜುನ ಯಾಲೆ ಮತ್ತು ರಿತಿಕಾ ರವಿ ಅವರು ಎಐಟಿಎ 14 ವರ್ಷದೊಳಗಿನವರ ಸಿಎಸ್7 ಟೆನಿಸ್ ಟೂರ್ನಿಯ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.ಶ್ರೀನಾಥ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಬುಧವಾರ ಚನ್ನಮಲ್ಲಿಕಾರ್ಜುನ 2-6, 6-2, 6-2ರಿಂದ ವಿಷ್ಣು ಮೋಹನ್ ಅವರನ್ನು ಮಣಿಸಿದರು. ಮೊದಲ ಸೆಟ್ ಕಳೆದುಕೊಂಡರೂ ಛಲಬಿಡದ ಚನ್ನಮಲ್ಲಿಕಾರ್ಜುನ ಅವರಿಗೆ ಜಯ ಒಲಿಯಿತು.
ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ ಘೋಷಣೆ
ಬಾಲಕಿಯರ ಸಿಂಗಲ್ಸ್ ಎಂಟರಘಟ್ಟದ ಸೆಣಸಾಟದಲ್ಲಿ ರಿತಿಕಾ 7-6 (10), 6-4ರಿಂದ ಜಿಯಾ ಸಿಂಗ್ ಸವಾಲು ಮೀರಿದರು.
ಬಾಲಕರ ವಿಭಾಗದ ಇನ್ನುಳಿದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಅಹಿಲ್ ಆಯಾಜ್ 6-3, 6-4ರಿಂದ ಮೀರ್ ಫಜಲ್ ಅಲಿ ವಿರುದ್ಧ, ಅನಂತ ಕೃಷ್ಣ 6-1, 6-1ರಿಂದ ರಿತಿಕ್ ಜಯಂತ್ ವಿರುದ್ಧ, ಎಂ.ದಿಗಂತ್ 6-2, 6-2ರಿಂದ ವಿ.ಎಸ್.ರಘು ಎದುರು ಜಯಿಸಿದರು.
ಬಾಲಕಿಯರ ವಿಭಾಗದಲ್ಲಿ ಇಶಾ ಮೋಹಿತೆ 6-2, 7-6 (3)ರಿಂದ ಸಾನ್ವಿ ಮಿಶ್ರಾ ವಿರುದ್ಧ, ದಿಶಾ ಕುಮಾರ್ 6-3, 2-6, 6-1ರಿಂದ ಆದ್ಯಾ ಚೌರಾಸಿಯಾ ಎದುರು, ಅರ್ಜಾನ್ ಖೊರಿಕವಾಲಾ 6–0, 6–1ರಿಂದ ಹೇಮಜಾ ರೆಡ್ಡಿ ಎದುರು ಜಯಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.