ಜಿನೇವಾ: ಎರಡನೇ ಶ್ರೇಯಾಂಕದ ಯುಕಿ ಭಾಂಬ್ರಿ ಮತ್ತು ರಾಬರ್ಟ್ ಗ್ಯಾಲವೆ ಜೋಡಿ, ಜಿನೀವಾ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಜರ್ಮನಿಯ ಜಾಕೋಬ್ ಸ್ನೇಟ್ಟರ್– ಮಾರ್ಕ್ ವಾಲ್ನರ್ ಜೋಡಿಯ ಎದುರು ಸೋಲನುಭವಿಸಿತು.

ಇಂಡೊ–ಅಮೆರಿಕನ್ ಜೋಡಿ ಬುಧವಾರ ನಡೆದ 16ರ ಸುತ್ತಿನ ಪುರುಷರ ಡಬಲ್ಸ್ ಪಂದ್ಯದಲ್ಲಿ 6–7 (3), 4–6 ರಿಂದ ಶ್ರೇಯಾಂಕರಹಿತ ಎದುರಾಳಿಯೆದುರು ಹಿಮ್ಮೆಟ್ಟಿತು.

ಮೊದಲ ಸುತ್ತಿನಲ್ಲೇ ಹೊರಬಿದ್ದ ಕಾರಣ ಯುಕಿ– ಗ್ಯಾಲವೆ ಜೋಡಿಗೆ ಪಾಯಿಂಟ್ಸ್ ದೊರೆಯಲಿಲ್ಲ. ಆದರೆ ₹3.14 ಲಕ್ಷ ಬಹುಮಾನ ಹಣವನ್ನು ತಮ್ಮೊಳಗೆ ಹಂಚಿಕೊಂಡಿತು. ಈ ಟೂರ್ನಿಯ ಒಟ್ಟು ₹5.77 ಕೋಟಿ ಬಹುಮಾನ ಹಣ ಹೊಂದಿದೆ. ಕಳೆದ ವಾರ ಈ ಜೋಡಿ ಬೋರ್ಡೌ ಚಾಲೆಂಜರ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.