ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023: ನೆದರ್ಲೆಂಡ್ಸ್‌ ವಿರುದ್ಧ ಆಸ್ಟ್ರೇಲಿಯಾಗೆ 309 ರನ್‌ಗಳ ಜಯ

Published 25 ಅಕ್ಟೋಬರ್ 2023, 15:42 IST
Last Updated 25 ಅಕ್ಟೋಬರ್ 2023, 15:42 IST
ಅಕ್ಷರ ಗಾತ್ರ

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಆಸ್ಟ್ರೇಲಿಯಾ 309 ರನ್‌ಗಳ ಜಯ ಸಾಧಿಸಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. 

ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 399 ರನ್‌ ಪೇರಿಸಿತು. ಈ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ 21 ಓವರ್‌ಗಳಲ್ಲಿ 90 ರನ್‌ ಗಳಿಸಿ ಎಲ್ಲಾ ವಿಕೆಟ್‌ ಕಳೆದುಕೊಂಡಿತು.

ವಾರ್ನರ್‌ ಮತ್ತು ಮ್ಯಾಕ್ಸ್‌ವೆಲ್‌ ಶತಕ ಸಿಡಿಸಿದರು. ಹಾಗೇ ಸ್ಮಿತ್‌ ಮತ್ತು ಲಾಬುಶೇನ್‌ ಅರ್ಧ ಶತಕಗಳಿಸಿ ಗಮನ ಸೆಳೆದರು. ಈ ಪಂದ್ಯದಲ್ಲಿ ಜಂಪಾ 4 ವಿಕೆಟ್‌ ಪಡೆದರು.

ನೆದರ್ಲೆಂಡ್ಸ್ ತಂಡದವರು ಕಳಪೆ ಬ್ಯಾಟಿಂಗ್ ಮಾಡುವ ಮೂಲಕ ಸುಲಭವಾಗಿ ಸೋಲು ಕಂಡರು. ಲಾನ್ ವೀಕ್‌ 4 ವಿಕೆಟ್‌ ಪಡೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT