ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Rankings: ಸಿರಾಜ್‌ಗೆ ನಂ.1 ಸ್ಥಾನ ನಷ್ಟ, ಅಗ್ರಸ್ಥಾನ ಕಾಪಾಡಿಕೊಂಡ ಗಿಲ್

Published 15 ನವೆಂಬರ್ 2023, 9:18 IST
Last Updated 15 ನವೆಂಬರ್ 2023, 9:18 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಕ್ರಿಕೆಟ್ ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಬೌಲರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್‌ಗೆ ಅಗ್ರಸ್ಥಾನ ನಷ್ಟವಾಗಿದೆ.

ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 5ರ ಪಟ್ಟಿಯಲ್ಲಿ ಭಾರತದ ಮೂವರು ಬ್ಯಾಟರ್‌ಗಳು ಕಾಣಿಸಿಕೊಂಡಿದ್ದಾರೆ. ಗಿಲ್ ಹೊರತುಪಡಿಸಿ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಅನುಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ. ಈ ಪೈಕಿ ರೋಹಿತ್ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಟಾಪ್ 5ರ ಪಟ್ಟಿಯಲ್ಲಿ ಭಾರತದ ಮೂವರು ಬೌಲರ್‌ಗಳು ಸ್ಥಾನ ಪಡೆದಿದ್ದಾರೆ. ಜಸ್‌ಪ್ರೀತ್ ಬೂಮ್ರಾ ನಾಲ್ಕು ಮತ್ತು ಕುಲದೀಪ್ ಯಾದವ್ ಐದನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಅಗ್ರಸ್ಥಾನ ಗಳಿಸಿದ್ದಾರೆ.

ಐಸಿಸಿ ರ್‍ಯಾಂಕಿಂಗ್ - ಟಾಪ್ 10 ಬ್ಯಾಟರ್‌ಗಳ ಪಟ್ಟಿ ಇಂತಿದೆ:

1. ಶುಭಮನ್ ಗಿಲ್ (ಭಾರತ): 832 (ರೇಟಿಂಗ್ ಪಾಯಿಂಟ್ಸ್)

2. ಬಾಬರ್ ಆಜಂ (ಪಾಕಿಸ್ತಾನ): 824

3. ಕ್ವಿಂಟನ್ ಡಿ ಕಾಕ್ (ದ.ಆಫ್ರಿಕಾ): 773

4. ವಿರಾಟ್ ಕೊಹ್ಲಿ (ಭಾರತ): 772

5. ರೋಹಿತ್ ಶರ್ಮಾ (ಭಾರತ): 760

6. ರಸ್ಸೀ ವ್ಯಾನ್ ಡರ್ ದುಸ್ಸಾನ್ (ದ.ಆಫ್ರಿಕಾ): 753

7. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 751

8. ಡೇವಿಡ್ ಮಲಾನ್ (ಇಂಗ್ಲೆಂಡ್): 729

9. ಹ್ಯಾರಿ ಟೆಕ್ಟರ್ (ಐರ್ಲೆಂಡ್): 729

10. ಹೆನ್ರಿಚ್ ಕ್ಲಾಸೆನ್ (ದ.ಆಫ್ರಿಕಾ): 712

ಐಸಿಸಿ ರ್‍ಯಾಂಕಿಂಗ್ - ಟಾಪ್ 10 ಬೌಲರ್‌ಗಳ ಪಟ್ಟಿ ಇಂತಿದೆ:

1. ಕೇಶವ್ ಮಹಾರಾಜ್ (ದ.ಆಫ್ರಿಕಾ): 726

2. ಮೊಹಮ್ಮದ್ ಸಿರಾಜ್ (ಭಾರತ): 723

3. ಆ್ಯಡಂ ಜಂಪಾ (ಆಸ್ಟ್ರೇಲಿಯಾ): 695

4. ಜಸ್‌ಪ್ರೀತ್ ಬೂಮ್ರಾ (ಭಾರತ): 687

5. ಕುಲದೀಪ್ ಯಾದವ್ (ಭಾರತ): 682

6. ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ): 681

7. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್): 676

8. ರಶೀದ್ ಖಾನ್ (ಅಫ್ಗಾನಿಸ್ತಾನ): 667

9. ಶಾಹೀನ್ ಅಫ್ರಿದಿ (ಪಾಕಿಸ್ತಾನ): 650

10. ಮೊಹಮ್ಮದ್ ನಬಿ (ಅಫ್ಗಾನಿಸ್ತಾನ): 650

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT