ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತ ಕ್ಯಾಚ್ ಪಡೆದ ರವೀಂದ್ರ ಜಡೇಜ 'ಮೆಡೆಲ್ ಸೆಲೆಬ್ರೇಷನ್' ಹಿಂದಿನ ಗುಟ್ಟೇನು?

Published 19 ಅಕ್ಟೋಬರ್ 2023, 13:22 IST
Last Updated 19 ಅಕ್ಟೋಬರ್ 2023, 13:22 IST
ಅಕ್ಷರ ಗಾತ್ರ

ಪುಣೆ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಆಟಗಾರ ರವೀಂದ್ರ ಜಡೇಜ ಕ್ಯಾಚ್ ಪಡೆದ ಬಳಿಕ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ್ದಾರೆ.

ರವೀಂದ್ರ ಜಡೇಜ ಅವರ 'ಮೆಡೆಲ್ ಸೆಲೆಬ್ರೇಷನ್' ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಯಿತು. ಇದರ ಹಿಂದಿನ ಗುಟ್ಟನ್ನು ಬಾಂಗ್ಲಾದೇಶದ ಇನಿಂಗ್ಸ್ ಬಳಿಕ ಸ್ವತಃ ಜಡೇಜ ಅವರೇ ಮುರಿದಿದ್ದಾರೆ.

ಬಾಂಗ್ಲಾ ಇನಿಂಗ್ಸ್‌ನ 43ನೇ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ದಾಳಿಯಲ್ಲಿ ಮುಷ್ಫಿಕುರ್ ರಹೀಮ್ ಹೊಡೆದ ಚೆಂಡನ್ನು ಪಾಯಿಂಟ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರವೀಂದ್ರ ಜಡೇಜ, ತನ್ನ ಬಲಬದಿಗೆ ಡೈವ್ ಹೊಡೆದು ಅದ್ಭುತ ಕ್ಯಾಚ್ ಪಡೆದರು.

ಬಳಿಕ ಡ್ರೆಸ್ಸಿಂಗ್ ಕೊಠಡಿಯತ್ತ ನೋಡುತ್ತಾ ಪದಕ ಕೊರಳಿಗೆ ಹಾಕಿಕೊಳ್ಳುವಂತೆ ಸಂಭ್ರಮಾಚರಿಸಿದರು.

ಈ ಕುರಿತು ಇನಿಂಗ್ಸ್ ವಿರಾಮದ ವೇಳೆ ಕೇಳಿದಾಗ, ನನ್ನ ಸಂಭ್ರಮಾಚರಣೆಯನ್ನು ಫೀಲ್ಡಿಂಗ್ ಕೋಚ್ ಅವರಿಗೆ ಅರ್ಪಿಸುತ್ತೇನೆ. ಪ್ರತಿ ಪಂದ್ಯದ ಬಳಿಕ ಆ ನಿರ್ದಿಷ್ಟ ಪಂದ್ಯದಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ ಆಟಗಾರನಿಗೆ ಪದಕ ನೀಡಿ ಸನ್ಮಾನಿಸಲಾಗುತ್ತದೆ. ನಾನು ಕೂಡ ಸ್ಪರ್ಧೆಯಲ್ಲಿದ್ದೇನೆ ಎಂದು ಅವರಿಗೆ ತಿಳಿಸಲು ಬಯಸುತ್ತೇನೆ ಎಂದು ಜಡೇಜ ಹೇಳಿದ್ದಾರೆ.

ಬಾಂಗ್ಲಾ ವಿರುದ್ಧ ಪರಿಣಾಮಕಾರಿ ಬೌಲಿಂಗ್ ಸಂಘಟಿಸಿದ ಜಡೇಜ, 10 ಓವರ್‌ಗಳಲ್ಲಿ 38 ರನ್ ತೆತ್ತು ಎರಡು ವಿಕೆಟ್ ಗಳಿಸಿ ಮಿಂಚಿದರು.

ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಫೀಲ್ಡಿಂಗ್ ಮಾಡಿದ ಆಟಗಾರನಿಗೆ ಫೀಲ್ಡಿಂಗ್ ಕೋಚ್ ಪದಕ ನೀಡಿ ಸನ್ಮಾನಿಸುತ್ತಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡರ್‌ಗಾಗಿನ ಪದಕವನ್ನು ವಿರಾಟ್ ಕೊಹ್ಲಿ ಗೆದ್ದರು. ಬಳಿಕ ಅಫ್ಗಾನಿಸ್ತಾನ ವಿರುದ್ಧ ಶಾರ್ದೂಲ್ ಠಾಕೂರ್ ಮತ್ತು ಪಾಕಿಸ್ತಾನ ವಿರುದ್ಧ ಕೆ.ಎಲ್. ರಾಹುಲ್ ಪದಕಕ್ಕೆ ಭಾಜನರಾದರು.

ಟೀಮ್ ಇಂಡಿಯಾ ಆಟಗಾರರೊಂದಿಗೆ ಜಡೇಜ ಸಂಭ್ರಮ

ಟೀಮ್ ಇಂಡಿಯಾ ಆಟಗಾರರೊಂದಿಗೆ ಜಡೇಜ ಸಂಭ್ರಮ

(ರಾಯಿಟರ್ಸ್ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT