ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IND vs PAK: ಪಾಕ್ ವಿರುದ್ಧದ ಪಂದ್ಯ ತುಂಬಾ ವಿಶೇಷ ಎಂದ ಕೊಹ್ಲಿ

Published 14 ಅಕ್ಟೋಬರ್ 2023, 6:14 IST
Last Updated 14 ಅಕ್ಟೋಬರ್ 2023, 6:14 IST
ಅಕ್ಷರ ಗಾತ್ರ

ಅಹಮದಾಬಾದ್: ಏಕದಿನ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಕುರಿತು ಟೀಮ್ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ಹಾರ್ದಿಕ ಪಾಂಡ್ಯ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿಡಿಯೊ ಬಿಡುಗಡೆ ಮಾಡಿದೆ.

ಇಂತಹ ಪಂದ್ಯಗಳು ಯಾವತ್ತೂ ತುಂಬಾ ವಿಶೇಷವೆನಿಸುತ್ತದೆ. ಮೆಲ್ಬರ್ನ್‌ನ (ಕಳೆದ ಬಾರಿದ ವಿಶ್ವಕಪ್ ಪಂದ್ಯವನ್ನು ಉಲ್ಲೇಖ ಮಾಡುತ್ತಾ) ಹೋಟೆಲ್‌, ಸ್ಟೇಡಿಯಂ ಹೊರಗಡೆ ಅಭಿಮಾನಿಗಳ ಸದ್ದು ನಿಜಕ್ಕೂ ಅದ್ಭುತವಾಗಿತ್ತು. ಮೈದಾನಕ್ಕೂ ಕಾಲಿಟ್ಟ ಕ್ಷಣದಲ್ಲೂ ಕ್ರೀಡಾಂಗಣದಲ್ಲೂ ಆ ಶಕ್ತಿಯು ಭಾಸವಾಯಿತು ಎಂದು ಕೊಹ್ಲಿ ವಿವರಿಸಿದ್ದಾರೆ.

ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳ ಮುಂದೆ ಆಡುವುದನ್ನು ಎದುರು ನೋಡುತ್ತಿದ್ದೇನೆ. ಖಂಡಿತವಾಗಿಯೂ ತುಂಬಾ ಉತ್ಸುಕನಾಗಿದ್ದೇನೆ ಎಂದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

ಅಹಮಾಬಾದ್‌ನಲ್ಲಿ ಇಂತಹ ವಾತಾವರಣದಲ್ಲಿ ಭಾರತ-ಪಾಕ್ ನಡುವಣ ಪಂದ್ಯವನ್ನು ಆನಂದಿಸುವುದೇ ಅದ್ಭುತ ಅನುಭವವಾಗಿರಲಿದೆ ಎಂದು ಕೋಚ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT