ಬೆಂಗಳೂರು: ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಗೆಲ್ಲುವ ಜತೆಯಲ್ಲೇ ರನ್‌ರೇಟ್ ಕೂಡಾ ಉತ್ತಮಪಡಿಸಿರುವುದರಿಂದ ನಾಲ್ಕರಘಟ್ಟ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಸೆಮಿಫೈನಲ್ ‘ರೇಸ್’ನಲ್ಲಿರುವ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳು ಕೊನೆಯ ಲೀಗ್ ಪಂದ್ಯಗಳನ್ನು ಗೆದ್ದರೂ, ರನ್‌ರೇಟ್‌ನಲ್ಲಿ ನ್ಯೂಜಿಲೆಂಡ್ (+0.743) ತಂಡವನ್ನು ಹಿಂದಿಕ್ಕುವುದು ಸುಲಭವಲ್ಲ.

ಅಫ್ಗನ್‌ಗೆ (–0.338) ಹೋಲಿಸಿದರೆ ಪಾಕ್ ತಂಡದ (0.036) ರನ್‌ರೇಟ್ ಉತ್ತಮವಾಗಿದೆ.

ರನ್‌ರೇಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಬೇಕಾದರೆ ಹಷ್ಮತ್ ಉಲ್ಲಾ ಶಹೀದಿ ಬಳಗ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 438 ರನ್‌ಗಳಿಂದ ಮಣಿಸಬೇಕು. ಇದು ಅಸಾಧ್ಯವೆಂದೇ ಹೇಳಬಹುದು.

ಬಾಬರ್ ಅಜಂ ಬಳಗದ ಹಾದಿ ಕೂಡಾ ಸುಗಮವಾಗಿಲ್ಲ. ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 287 ರನ್‌ಗಳಿಗೂ ಅಧಿಕ ಅಂತರದಿಂದ ಸೋಲಿಸಿದರೆ ಮಾತ್ರ, ರನ್‌ರೇಟ್‌ನಲ್ಲಿ ನ್ಯೂಜಿಲೆಂಡ್ ಹಿಂದಿಕ್ಕಿ ಸೆಮಿ ಪ್ರವೇಶಿಸಲು ಸಾಧ್ಯ.

ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿದರೆ ಕಡಿಮೆ ಓವರ್‌ಗಳಲ್ಲಿ ರನ್ ಬೆನ್ನಟ್ಟಬೇಕು. ಉದಾಹರಣೆಗೆ ಇಂಗ್ಲೆಂಡ್‌ಅನ್ನು 150 ರನ್‌ಗಳಿಗೆ ನಿಯಂತ್ರಿಸಿದರೆ, ಪಾಕ್ 3.4 ಓವರ್‌ಗಳಲ್ಲಿ ಗುರಿ ಬೆನ್ನಟ್ಟಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.