ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಅಮೋಘ ಶತಕ ಗಳಿಸಿದ್ದಾರೆ.

ಆ ಮೂಲಕ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರೊಂದಿಗೆ ಎಲೈಟ್ ಸಾಲಿಗೆ ಸೇರಿದ್ದಾರೆ.
.World Cup: ಕೊಹ್ಲಿಗೆ ಕಾಣಿಕೆ ನೀಡಿದ ಸಚಿನ್.ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಕ್ರೀಡಾಂಗಣಕ್ಕೆ ನುಗ್ಗಿದ ಪ್ಯಾಲೆಸ್ಟೀನ್ ಬೆಂಬಲಿಗ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್, ಸ್ಮರಣೀಯ ಶತಕ ಗಳಿಸಿದರು.

ಟ್ರಾವಿಸ್ ಹೆಡ್ ಸೇರಿದಂತೆ ಇಲ್ಲಿಯವರೆಗೆ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಒಟ್ಟು ಏಳು ಮಂದಿ ಬ್ಯಾಟರ್‌ಗಳು ಶತಕ ಸಾಧನೆ ಮಾಡಿದ್ದಾರೆ.

ಈ ಪೈಕಿ ಶ್ರೀಲಂಕಾದ ಮಾಜಿ ಬ್ಯಾಟರ್ ಅರವಿಂದ ಡಿಸಿಲ್ವ ಬಳಿಕ ಚೇಸಿಂಗ್‌ನಲ್ಲಿ ಶತಕ ಗಳಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಹೆಡ್ ಪಾತ್ರರಾದರು.

ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಾಧನೆ:

ಕ್ಲೈವ್ ಲಾಯ್ಡ್: 102 (1975)

ವಿವ್ ರಿಚರ್ಡ್ಸ್: 138* (1979)

ಅರವಿಂದ ಡಿಸಿಲ್ವ: 107* (1996)

ರಿಕಿ ಪಾಂಟಿಂಗ್: 140* (2003)

ಆ್ಯಡಂ ಗಿಲ್‌ಕ್ರಿಸ್ಟ್: 149 (2007)

ಮಹೇಲಾ ಜಯವರ್ಧನೆ: 103* (2011)

ಟ್ರಾವಿಸ್ ಹೆಡ್: 100* (2023)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.