ಚೆನ್ನೈ (ಪಿಟಿಐ): ಕರ್ನಾಟಕದ ಪಿ. ಬಾಲಕೃಷ್ಣ ಇಲ್ಲಿ ನಡೆಯುತ್ತಿರುವ 53ನೇ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್ಷಿಪ್ನ ಪುರುಷರ ವಿಭಾಗದ ಪೋಲ್ವಾಲ್ಟ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದುಕೊಂಡರು.

ಗುರುವಾರ ನಡೆದ ಸ್ಪರ್ಧೆಯಲ್ಲಿ ಬಾಲಕೃಷ್ಣ 4.85ಮೀ. ಜಿಗಿದು ಈ ಸಾಧನೆ ಮಾಡಿದರು. ಹರಿಯಾಣದವರಾದ ಪ್ರವೀಣ್ ಕುಮಾರ್ (4.90ಮೀ.) ಮತ್ತು ಸೋನಿ ಸೈನಿ (4.75ಮೀ.) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಜಯಿಸಿದರು.

ಒಲಿಂಪಿಯನ್ ಸುಧಾ ಸಿಂಗ್ 3000 ಮೀ. ಸ್ಟೀಪಲ್ ಚೆಸ್ ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಮಾಸ್ಕೊ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ಗೆ ಅರ್ಹತೆ ಗಳಿಸಿದರು. ಉತ್ತರ ಪ್ರದೇಶದ ಅಥ್ಲೀಟ್ ಸುಧಾ ಒಂಬತ್ತು ನಿಮಿಷ 45.60 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು.

ಇದರ ಮೂಲಕ 2012ರಲ್ಲಿ ತಮ್ಮ ಹೆಸರಿನಲ್ಲಿದ್ದ ದಾಖಲೆಯನ್ನು (ಕಾಲ: 9:47.70ಸೆ.) ಸುಧಾರಿಸಿಕೊಂಡರು.ಮಹಿಳಾ ವಿಭಾಗದ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಕೇರಳದ ಮಯೂಖಾ ಜಾನಿ (13.58ಮೀ.) ಚಿನ್ನ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.