ಕೋಲ್ಕತ್ತ (ಪಿಟಿಐ): ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಫೈನಲ್ ಪಂದ್ಯದಲ್ಲಿ ಎಡವಿದ ಭಾರತದ ದೀಪಿಕಾ ಕುಮಾರಿ ಇಸ್ತಾಂಬುಲ್ನಲ್ಲಿ ನಡೆದ ಆರ್ಚರಿ ವಿಶ್ವಕಪ್ನ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.

ಭಾನುವಾರ ನಡೆದ ಫೈನಲ್ ಪಂದ್ಯದ ರಿಕರ್ವ್ ವಿಭಾಗದಲ್ಲಿ 17 ವರ್ಷದ ದೀಪಿಕಾ 5-6ರಲ್ಲಿ ಚೀನಾದ ಚೇಂಗ್ ಮಿಂಗ್ ಎದುರು ಸೋಲು ಕಂಡು ಬೆಳ್ಳಿ ಪದಕ ಪಡೆದರು.

ಮೊದಲ ಸೆಟ್ನಲ್ಲಿ ಸೋಲು ಕಂಡ ದೀಪಿಕಾ ಮತ್ತೆ ಲಯ ಕಂಡುಕೊಂಡು ಎರಡು ಹಾಗೂ ಮೂರನೇ ಸೆಟ್ನಲ್ಲಿ 4-2ರಲ್ಲಿ ಮುನ್ನಡೆ ಸಾಧಿಸಿದ್ದರು. ಇದೇ ಆಟವನ್ನು ಮುಂದಿನ ಸೆಟ್ನಲ್ಲಿ ಕಾಯ್ದಕೊಳ್ಳಲಿಲ್ಲ. ಆದರೆ ಮರು ಹೋರಾಟ ನಡೆಸಿದ ಮಿಂಗ್ ಭಾರತದ ಆಟಗಾರ್ತಿಗೆ ಸೋಲುಣಿಸಿ ಚಿನ್ನದ ಪದಕ ಗೆದ್ದುಕೊಂಡರು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಭಾರತದ ಆಟಗಾರ್ತಿ ಉತ್ತಮ ಆರಂಭ ಪಡೆದರೂ ಸಹ, ನಂತರ ಚುರುಕಿನ ಪ್ರದರ್ಶನ ನೀಡುವಲ್ಲಿ ಎಡವಿದರು. ಇದರಿಂದ ಚಿನ್ನದ ಪದಕ ಜಯಿಸುವ ಅವಕಾಶ ತಪ್ಪಿ ಹೋಯಿತು.

ಮುಂಬೈ ವರದಿ: ವಿಶ್ವಕಪ್ನಲ್ಲಿ ಬೆಳ್ಳಿ ಪದಕ ಜಯಿಸಿ ಸಂಭ್ರಮದಲ್ಲಿರುವ ದೀಪಿಕಾ ಐಐಎಸ್ಎಸ್ ನೀಡುವ `ಸ್ಪಿರಿಟ್ ಆಫ್ ಸ್ಪೋರ್ಟಿಂಗ್~ ಮಹಿಳೆಯರ ವಿಭಾಗದ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಎರಡು ಚಿನ್ನದ ಪದಕ ಜಯಿಸಿದ್ದರು. ಪುರುಷರ ವಿಭಾಗದಲ್ಲಿ ಜಿಮ್ನಾಷ್ಟಿಕ್ ಸ್ಪರ್ಧಿ ಆಶೀಶ್ ಕುಮಾರ್ ಈ ಪ್ರಶಸ್ತಿ ಜಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.