ಬೆಂಗಳೂರು: ಟೂಶೆ ಗಾಲ್ಫ್ ಆಶ್ರಯದಲ್ಲಿ ನಡೆಯುತ್ತಿರುವ ‘ಟೀಮ್ ಗಾಲ್ಫ್ ಲೀಗ್’ ಟೂರ್ನಿಯ ಫೈನಲ್ ಇಲ್ಲಿನ ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಬುಧವಾರ ಮತ್ತು ಗುರುವಾರ ನಡೆಯಲಿದೆ.

ಪ್ರಸಕ್ತ ಋತುವಿನಲ್ಲಿ ದೇಶದ ವಿವಿಧ ನಗರಗಳಲ್ಲಿ ಈಗಾಗಲೇ ಲೀಗ್‌ನ ಪಂದ್ಯಗಳು ನಡೆದಿವೆ. ಅಂತಿಮವಾಗಿ 12 ತಂಡಗಳು ಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ.

ಬೆಂಗಳೂರಿನ ಎಸ್‌ಎಚ್‌ಎಂ ಮತ್ತು ಬೆಂಗಳೂರು ಈಗಲ್ಸ್ ತಂಡಗಳು ಕಣದಲ್ಲಿವೆ. ಅಹಮದಾಬಾದ್, ಹೈದರಾಬಾದ್, ಚಂಡೀಗಡ, ಗುಡಗಾಂವ್, ನೊಯ್ಡಾ, ಚೆನ್ನೈ, ಕೊಯಮತ್ತೂರು, ಮುಂಬೈ, ಪುಣೆ ಮತ್ತು ಕೋಲ್ಕತ್ತದ ತಂಡಗಳೂ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

‘ಟೂಶೆ ಗಾಲ್ಫ್‌ನ ನಾಲ್ಕನೇ ವರ್ಷದ ಈ ಲೀಗ್‌ನಲ್ಲಿ ಇದುವರೆಗೆ ಪ್ರಬಲ ಪೈಪೋಟಿ ಕಂಡುಬಂದಿದೆ. 12 ತಂಡ ಗಳು ಫೈನಲ್‌ನಲ್ಲಿ ಆಡಲು ಅರ್ಹತೆ ಪಡೆದಿವೆ’ ಎಂದು ಟೂಶೆ ಗಾಲ್ಫ್‌ನ ವ್ಯವ ಸ್ಥಾಪಕ ನಿರ್ದೇಶಕ ರತನ್ ಕುಮಾರ್ ಮಂಗಳವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.