ನವದೆಹಲಿ (ಪಿಟಿಐ): ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಭಾರತದ ಮನೋಜ್ ಕುಮಾರ್ ಜೋರ್ಡಾನ್ನ ಅಮಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ 64 ಕೆ.ಜಿ.ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮನೋಜ್ ಸ್ಥಳೀಯ ಬಾಕ್ಸರ್ ಇಬ್ರಾಹಿಂ ಸಲೆ ಅವರನ್ನು ಸೋಲಿಸಿದರು. 26 ವರ್ಷ ವಯಸ್ಸಿನ ಮನೋಜ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಶ್ರೀಲಂಕಾದ ಮೊಹಮ್ಮದ್ ದಿಲ್ಶಾನ್ ಅವರನ್ನು ಎದುರಿಸಲಿದ್ದಾರೆ.

ಎತ್ತರದ ನಿಲುವು ಹೊಂದಿರುವ ಮನೋಜ್ ಅದರ ಪೂರ್ಣ ಪ್ರಯೋಜನ ಪಡೆದು ಆಕ್ರಮಣಕಾರಿ ಪ್ರದರ್ಶನ ತೋರಿದರು. ಈ ಚಾಂಪಿಯನ್ಷಿಪ್ನಲ್ಲಿ ಭಾರತದ ಜಗರೂಪ್ ಸಿಂಗ್ (84 ಕೆ.ಜಿ.), ವಿಕಾಸ್ ಮಲಿಕ್ (60 ಕೆ.ಜಿ.) ಕೂಡ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.