ಬೆಂಗಳೂರು: ಕರ್ನಾಟಕದ ವರ್ಷಾ ಸಂಜೀವ್ ಒಳಗೊಂಡಂತೆ ಭಾರತದ ಮಹಿಳಾ ಸ್ಪರ್ಧಿಗಳು ಲಾತ್ವಿಯದ ಡಗಾವ್‌ಪಿಲ್ಸ್‌ನಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.

ಭಾನುವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಬೆಂಗಳೂರಿನ ವರ್ಷಾ 55-38, 56-43, 57-35 ರಲ್ಲಿ ಪೋಲೆಂಡ್‌ನ ಎವಾ ಪಾವಿನ್‌ಸ್ಕಾ ಅವ ರನ್ನು ಮಣಿಸಿದರು. ವರ್ಷಾ ಇದುವರೆಗೆ ಆಡಿರುವ ಎಲ್ಲ ಪಂದ್ಯಗಳಲ್ಲೂ ಜಯ ಸಾಧಿಸಿದ್ದಾರೆ. ವಿದ್ಯಾ ಪಿಳ್ಳೈ ಮತ್ತು ಅರಾಂತ್ಸಾ ಸ್ಯಾಂಚಿಸ್ ಅವರೂ ತಮ್ಮ ಎದುರಾಳಿಗಳನ್ನು ಮಣಿಸಿದರು. ಎರಡು ಬಾರಿಯ ಕಂಚಿನ ಪದಕ ವಿಜೇತೆ ವಿದ್ಯಾ 18-57, 61-15, 67-44, 50-39 ರಲ್ಲಿ ಜೆಸ್ಸಿಕಾ ವುಡ್ಸ್ ವಿರುದ್ಧ ಜಯ ಪಡೆದರು.

ಅರಾಂತ್ಸಾ 52-39, 33-69, 51-72, 56-48, 62-36 ರಲ್ಲಿ ರಷ್ಯಾದ ದರಿಯಾ ಸಿರೋತಿನಾ ವಿರುದ್ಧ ಗೆಲುವು ಸಾಧಿಸಿದರು.
ಪುರುಷರ ವಿಭಾಗದಲ್ಲೂ ಭಾರತದ ಸ್ಪರ್ಧಿಗಳು ಗೆಲುವಿನ ಓಟ ನಡೆಸಿದ್ದಾರೆ. ಶಹ ಬಾಜ್ ಆದಿಲ್ ಖಾನ್ 65-25, 100(56)-01, 64-27, 56-46 ಫ್ರೇಮ್‌ಗಳಿಂದ ದಕ್ಷಿಣ ಆಫ್ರಿಕಾದ ಜಾಕೊಬ್ ಪೆಟ್ರಸ್ ವಾನ್ ಜಾರ್ಸ್‌ವೆಲ್ಡ್ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.