ಬೆಂಗಳೂರು: ಭರವಸೆಯ ಸ್ಪರ್ಧಿ ಟಾಮಿ ವೈಷ್ಣವಿ ಇಲ್ಲಿ ಆರಂಭವಾದ 29ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಚಿನ್ನದ ಪದಕದ ‘ಬೇಟೆ’ಗೆ ಚಾಲನೆ ನೀಡಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಾಲಕಿಯರ 14 ವರ್ಷ ವಯಸ್ಸಿ ನೊಳಗಿನವರ ವಿಭಾಗದ ಟ್ರಯಥ್ಲಾನ್‌ನಲ್ಲಿ ಟಾಮಿ ಒಟ್ಟು 1638 ಪಾಯಿಂಟ್ ಸಂಗ್ರಹಿಸುವ ಮೂಲಕ ಅಗ್ರಸ್ಥಾನ ಪಡೆದರು.

ಟ್ರಯಥ್ಲಾನ್‌ನ ಎಲ್ಲಾ ಮೂರು ಸ್ಪರ್ಧೆಗಳಲ್ಲೂ (100 ಮೀ. ಓಟ, ಲಾಂಗ್ ಜಂಪ್ ಮತ್ತು ಷಾಟ್‌ಪಟ್) ಗಮನಾರ್ಹ ಪ್ರದರ್ಶನ ತೋರಿದ ಟಾಮಿ ರಾಜ್ಯಕ್ಕೆ ಮೊದಲ ಬಂಗಾರ ತಂದಿತ್ತ ಗೌರವ ಪಡೆದರು. 1597 ಪಾಯಿಂಟ್ ಕಲೆ ಹಾಕಿದ ತಮಿಳುನಾಡಿನ ಎಸ್. ಸಂಯುಕ್ತಾ ಹಾಗೂ 1542 ಪಾಯಿಂಟ್ ಸಂಗ್ರಹಿಸಿದ ಚಂಡೀಗಡದ ದಿವ್ಯಾನ್ಶಿ ಶುಕ್ಲಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.

ಬಾಲ್ಡ್‌ವಿನ್ ಬಾಲಕಿಯರ ಶಾಲೆಯಲ್ಲಿ ಕಲಿ ಯುತ್ತಿರುವ 13ರ ಹರೆಯದ ಟಾಮಿ 100 ಮೀ. ಓಟವನ್ನು 13.33 ಸೆಕೆಂಡ್‌ಗಳಲ್ಲಿ ಪೂರೈಸಿದರು. ಲಾಂಗ್‌ಜಂಪ್‌ನಲ್ಲಿ 5.00 ಮೀ. ದೂರ ಜಿಗಿದರೆ, ಷಾಟ್‌ಪಟ್‌ನಲ್ಲಿ 7.49 ಮೀ. ಸಾಧನೆ ಮಾಡಿದರು. ಟಾಮಿ ಗೆದ್ದುಕೊಟ್ಟ ಚಿನ್ನ ಅಲ್ಲದೆ ಕರ್ನಾಟಕ ಮೊದಲ ದಿನ ತಲಾ ಒಂದು ಬೆಳ್ಳಿ ಹಾಗೂ ಕಂಚು ಜಯಿಸಿತು. ಬಾಲಕಿಯರ 14 ವರ್ಷ ವಯಸ್ಸಿನೊಳಗಿನವರ ಹೈಜಂಪ್‌ನಲ್ಲಿ ಸಿ. ಧೃತಿ ಬೆಳ್ಳಿ ಗೆದ್ದರು. ಅವರು 1.47 ಮೀ. ಎತ್ತರ ಜಿಗಿಯುವಲ್ಲಿ ಯಶ ಕಂಡರು.

ಎಸ್. ಲೋಕೇಶ್ ಬಾಲಕರ 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಲಾಂಗ್‌ಜಂಪ್ ನಲ್ಲಿ ಕಂಚು ಗೆದ್ದುಕೊಂಡರು. ಅವರು 6.14 ಮೀ. ದೂರ ಜಿಗಿಯುವಲ್ಲಿ ಯಶಸ್ವಿಯಾದರು. ಈ ವಿಭಾಗದಲ್ಲಿ ಹರಿಯಾಣದ ಸುನಿಲ್ (6.41 ಮೀ.) ಮತ್ತು ಕೇರಳದ ಸಲ್ವಿನ್ ಸಾಜು (6.16 ಮೀ.) ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರು.

ಎರಡು ಕೂಟ ದಾಖಲೆ: ಕೇರಳದ ಸ್ಪರ್ಧಿಗಳು ನಿರೀಕ್ಷೆಯಂತೆಯೇ ಮೊದಲ ದಿನ ಪ್ರಭುತ್ವ ಮೆರೆ ದರಲ್ಲದೆ, ಎರಡು ಕೂಟ ದಾಖಲೆ ನಿರ್ಮಿಸಿದರು.
ಬಾಲಕಿಯರ 14 ವರ್ಷ ವಯಸ್ಸಿನೊಳಗಿನವರ ಹೈಜಂಪ್‌ನಲ್ಲಿ ಗಾಯತ್ರಿ ಶಿವಕುಮಾರ್ ಕೂಟ ದಾಖಲೆಯೊಂದಿಗೆ ಸ್ವರ್ಣ ಜಯಿಸಿದರು. 12ರ ಹರೆಯದ ಗಾಯತ್ರಿ 1.55 ಮೀ. ಎತ್ತರ ಜಿಗಿಯುವಲ್ಲಿ ಯಶ ಕಂಡರು. ಈ ಮೂಲಕ ಮಹಾರಾಷ್ಟ್ರದ ಜುಯೆಲಿ ಬಿ. (1.52) ಅವರು 2010 ರಲ್ಲಿ ಸ್ಥಾಪಿಸಿದ್ದ ದಾಖಲೆ ಮುರಿದರು. ಈ ವಿಭಾಗದ ರಾಷ್ಟ್ರೀಯ ದಾಖಲೆ (1.59 ಮೀ.) ಕೂಡಾ ಗಾಯತ್ರಿ ಹೆಸರಿನಲ್ಲಿದೆ.

ಪಿ.ಯು. ಚಿತ್ರಾ ಬಾಲಕಿಯರ 20 ವರ್ಷ ವಯಸ್ಸಿನೊಳಗಿನವರ ವಿಭಾಗದ 1500 ಮೀ. ಓಟದಲ್ಲಿ ಕೂಟ ದಾಖಲೆ ಸ್ಥಾಪಿಸಿದರು. ನಾಲ್ಕು ನಿಮಿಷ 33.82 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಅವರು ಪಂಜಾಬ್‌ನ ಸುನಿತಾ ರಾಣಿ (4:35.00) 17ನೇ ವರ್ಷಗಳ ಹಿಂದೆ ಸ್ಥಾಪಿಸಿದ್ದ ದಾಖಲೆಯನ್ನು ಅಳಿಸಿಹಾಕಿದರು.

ಈ ಋತುವಿನ ಆರಂಭದಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಏಷ್ಯನ್ ಸ್ಕೂಲ್ ಅಥ್ಲೆಟಿಕ್ಸ್‌ನ 3000 ಮೀ. ಓಟದಲ್ಲಿ ಚಿನ್ನ ಜಯಿಸಿದ್ದ ಚಿತ್ರಾ ಆರಂಭದಿಂದಲೇ ಮುನ್ನಡೆ ಕಾಪಾಡಿಕೊಂಡು ಮೊದಲಿಗರಾಗಿ ಗುರಿಮುಟ್ಟಿದರು. ಮೊದಲ ದಿನದ ಸ್ಪರ್ಧೆಗಳ ಬಳಿಕ ಕೇರಳ 58 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಹರಿಯಾಣ (52) ಮತ್ತು ತಮಿಳುನಾಡು (46) ಬಳಿಕದ ಸ್ಥಾನಗಳಲ್ಲಿವೆ.

ಮೊದಲ ದಿನದ ಸ್ಪರ್ಧೆಗಳ ಫಲಿತಾಂಶ:
ಬಾಲಕರ ವಿಭಾಗ: 20 ವರ್ಷ ವಯಸ್ಸಿನೊಳಗಿನವರು:
1500 ಮೀ. ಓಟ: ಎಂ. ನರೇಶ್ (ಆಂಧ್ರ ಪ್ರದೇಶ)-1, ಆನಂದ್ (ಹರಿಯಾಣ)-2, ಅಲ್ಬಿನ್ ಸನ್ನಿ (ಕೇರಳ)-3. ಕಾಲ: 3:59.63 ಸೆ.
ಷಾಟ್‌ಪಟ್: ಚೈತನ್ಯ ದಬಾಸ್ (ದೆಹಲಿ)-1, ಸುರೇಂದರ್ ಸಿಂಗ್ (ಹರಿಯಾಣ)-2, ಪ್ರದೀಪ್ ಕುಮಾರ್ (ಉತ್ತರ ಪ್ರದೇಶ)-3. ದೂರ: 17.07 ಮೀ.

18 ವರ್ಷ ವಯಸ್ಸಿನೊಳಗಿನವರು:
1500 ಮೀ. ಓಟ: ಅಜಯ್ ಕುಮಾರ್ (ಅಸ್ಸಾಂ)-1, ಶಶಿ ಭೂಷಣ್ (ಪಶ್ಚಿಮ ಬಂಗಾಳ)-2, ಟ್ವಿಂಕಲ್ ಟಾಮಿ (ಕೇರಳ)-3. ಕಾಲ: 3:59.34 ಸೆ.

16 ವರ್ಷ ವಯಸ್ಸಿನೊಳಗಿನವರು:
1000 ಮೀ. ಓಟ: ಅರ್ಶ್‌ದೀಪ್ ಸಿಂಗ್ (ಪಂಜಾಬ್)-1, ಶಾ ಫೈಜಲ್ (ಮಧ್ಯ ಪ್ರದೇಶ)-2, ಬಿಯಾಂತ್ ಸಿಂಗ್ (ದೆಹಲಿ)-3. ಕಾಲ: 2:31.93 ಸೆ.
ಹೈಜಂಪ್: ಅನಿಲ್ ಸಾಹು (ಮಹಾರಾಷ್ಟ್ರ)-1, ಎನ್. ಮಹಮ್ಮದ್ ಅಕೀಲ್ (ತಮಿಳುನಾಡು)-2, ಜಿಯೊ ಜೋಸ್ (ಕೇರಳ)-3. ಎತ್ತರ: 1.95 ಮೀ.
ಡಿಸ್ಕಸ್ ಥ್ರೋ: ಸಂಜಯ್ ಕುಮಾರ್ (ಉತ್ತರ ಪ್ರದೇಶ)-1, ಅಭಿಷೇಕ್ ಡಿ. (ದೆಹಲಿ)-2, ಸದ್ದಾಂ ಹುಸೇನ್ (ದೆಹಲಿ)-3. ದೂರ: 47.40 ಮೀ.

14 ವರ್ಷ ವಯಸ್ಸಿನೊಳಗಿನವರು:
600 ಮೀ. ಓಟ: ವಿ. ಭರತ್ (ತಮಿಳುನಾಡು)-1, ಹೀರಾ ಪಾಲ್ (ಉತ್ತರ ಪ್ರದೇಶ)-2, ಡಿ. ಶ್ರೀ ಕಾಂತ್ (ಆಂಧ್ರ ಪ್ರದೇಶ)-3. ಕಾಲ: 1:27.52 ಸೆ.
ಲಾಂಗ್‌ಜಂಪ್: ಸುನಿಲ್ (ಹರಿಯಾಣ)-1, ಸಲ್ವಿನ್ ಸಾಜು (ಕೇರಳ)-2, ಎಸ್. ಲೋಕೇಶ್ (ಕರ್ನಾಟಕ)-3. ದೂರ: 6.41 ಮೀ.
ಟ್ರಯಥ್ಲಾನ್: ಸರ್ಫ್‌ರಾಜ್ ನವಾಜ್ (ಮಹಾರಾಷ್ಟ್ರ, 1936 ಪಾಯಿಂಟ್)-1, ಅನಿಲ್ (ಹರಿಯಾಣ)-2, ಎಸ್. ಶ್ಯಾಮ್ (ತಮಿಳುನಾಡು)-3.

ಬಾಲಕಿಯರ ವಿಭಾಗ: 20 ವರ್ಷ ವಯಸ್ಸಿನೊಳಗಿನವರು:
1500 ಮೀ. ಓಟ: ಪಿ.ಯು ಚಿತ್ರಾ (ಕೇರಳ)-1, ಮೋನಿಕಾ ಚೌಧರಿ (ಮಧ್ಯ ಪ್ರದೇಶ)-2, ಎಂ.ಪಿ. ಸಫೀದಾ (ಕೇರಳ)-3. ಕಾಲ: 4:33.82 ಸೆ.
ಡಿಸ್ಕಸ್ ಥ್ರೋ: ಸುಮನ್ ದೇವಿ (ಪಂಜಾಬ್)-1, ಮನೀಷಾ (ಹರಿಯಾಣ)-2, ಜ್ಯೋತಿ (ಹರಿಯಾಣ)-3. ದೂರ: 40.75 ಮೀ.

18 ವರ್ಷ ವಯಸ್ಸಿನೊಳಗಿನವರು:
1500 ಮೀ. ಓಟ: ಜ್ಯೋತಿ ಸೈನಿ (ಪಂಜಾಬ್)-1, ಪ್ರೀತಿ ಮೆಹ್ತಾ (ಉತ್ತರಾಖಂಡ)-2, ರಿಶು ಸಿಂಗ್ (ಮಹಾರಾಷ್ಟ್ರ)-3. ಕಾಲ: 4:53.28 ಸೆ.

16 ವರ್ಷ ವಯಸ್ಸಿನೊಳಗಿನವರು:
1000 ಮೀ. ಓಟ: ದುರ್ಗಾ ಪ್ರಮೋದ್ (ಮಹಾರಾಷ್ಟ್ರ)-1, ನೀತು ಕುಮಾರಿ (ಜಾರ್ಖಂಡ್)-2, ಅಂಕಿತಾ ಚೌಧರಿ (ಉತ್ತರಾಖಂಡ)-3. ಕಾಲ: 3:03.03 ಸೆ.
ಲಾಂಗ್ ಜಂಪ್: ಎಸ್. ಪ್ರಿಯದರ್ಶಿನಿ (ತಮಿಳುನಾಡು)-1, ರುಕ್ಮಾ ಉದಯನ್ (ಕೇರಳ)-2, ಅನಿತಾ ದಾಸ್ (ಬಂಗಾಳ)-3. ದೂರ: 5.63 ಮೀ.

14 ವರ್ಷ ವಯಸ್ಸಿನೊಳಗಿನವರು:
600 ಮೀ. ಓಟ: ಎಲ್. ಶಮ್ಯಶ್ರೀ (ತಮಿಳುನಾಡು)-1, ಕಮಲ್‌ಜಿತ್ (ಹರಿಯಾಣ)-2, ಪಿ. ಕಾವ್ಯಾ (ಆಂಧ್ರ ಪ್ರದೇಶ)-3. ಕಾಲ: 1:39.55 ಸೆ.
ಹೈಜಂಪ್: ಗಾಯತ್ರಿ ಶಿವಕುಮಾರ್ (ಕೇರಳ)-1, ಸಿ. ಧೃತಿ (ಕರ್ನಾಟಕ)-2, ಎಸ್. ಆನಂದಿ (ತಮಿಳುನಾಡು)-3. ಎತ್ತರ: 1.55 ಮೀ.
ಟ್ರಯಥ್ಲಾನ್: ಟಾಮಿ ವೈಷ್ಣವಿ (ಕರ್ನಾಟಕ, 1638 ಪಾಯಿಂಟ್)-1, ಸಂಯುಕ್ತಾ (ತಮಿಳುನಾಡು)-2, ದಿವ್ಯಾನ್ಶಿ ಶುಕ್ಲಾ (ಚಂಡೀಗಡ)-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.