ಕೊಲಂಬೊ (ಎಎಫ್ಪಿ): ನ್ಯೂಜಿಲೆಂಡ್ ತಂಡದವರು ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತಮ್ಮ ಹಿಡಿತ ಬಿಗಿಗೊಳಿಸಿದ್ದಾರೆ.

ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ನಲ್ಲಿ 412 ರನ್ಗಳಿಗೆ ಆಲೌಟಾಯಿತು. ಆರಂಭಿಕ ಆಘಾತ ಅನುಭವಿಸಿರುವ ಲಂಕಾ ದಿನದಾಟದ ಅಂತ್ಯಕ್ಕೆ 17 ಓವರ್ಗಳಲ್ಲಿ 3 ವಿಕೆಟ್ಗೆ 43 ರನ್ ಗಳಿಸಿತ್ತು. ವೇಗದ ಬೌಲರ್ ಟಿಮ್ ಸೌಥಿ (16ಕ್ಕೆ 2) ಎದುರಾಳಿ ತಂಡದ ಕುಸಿತಕ್ಕೆ ಕಾರಣರಾದರು.

ಇದಕ್ಕೂ ಮುನ್ನ 2 ವಿಕೆಟ್ಗೆ 223 ರನ್ಗಳಿಂದ ಸೋಮವಾರ ಆಟ ಮುಂದುವರಿಸಿದ್ದ ಪ್ರವಾಸಿ ತಂಡ ಉತ್ತಮ ಮೊತ್ತ ಕಲೆಹಾಕಿತು. ಕೇನ್ ವಿಲಿಯಮ್ಸನ್ (135) ಶತಕ ಪೂರೈಸಿದರೆ, ನಾಯಕ ರಾಸ್ ಟೇಲರ್ 142 ರನ್ ಗಳಿಸಿ ಔಟಾದರು. ಡೇನಿಯಲ್ ಫ್ಲಿನ್ 53 ರನ್ ಗಳಿಸಿದರು. 103 ರನ್ಗಳಿಗೆ ಆರು ವಿಕೆಟ್ ಪಡೆದ ರಂಗನಾ ಹೆರಾತ್ ಲಂಕಾ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ ಇನಿಂಗ್ಸ್: 153 ಓವರ್ಗಳಲ್ಲಿ 412 (ಕೇನ್ ವಿಲಿಯಮ್ಸನ್ 135, ರಾಸ್ ಟೇಲರ್ 142, ರಂಗನಾ ಹೆರಾತ್ 103ಕ್ಕೆ 6). ಶ್ರೀಲಂಕಾ: ಮೊದಲ ಇನಿಂಗ್ಸ್ 17 ಓವರ್ಗಳಲ್ಲಿ 3 ವಿಕೆಟ್ಗೆ 43 (ತರಂಗ ಪರಣವಿತನ ಬ್ಯಾಟಿಂಗ್ 9, ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್ 20, ಟಿಮ್ ಸೌಥಿ 16ಕ್ಕೆ 2, ಟ್ರೆಂಟ್ ಬೌಲ್ಟ್ 16ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.