ಕೊಲಂಬೊ (ಪಿಟಿಐ): ಉಪುಲ್ ತರಂಗ (101; 167 ನಿ., 143 ಎ., 7 ಬೌಂಡರಿ) ಅವರ ಸಹನೆಯ ಆಟದ ಫಲವಾಗಿ ಶ್ರೀಲಂಕಾ ತಂಡದವರು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಇನ್ನೂ 27 ಎಸೆತಗಳು ಬಾಕಿ ಇರುವಂತೆ 8 ವಿಕೆಟ್‌ಗಳ ವಿಜಯ ಸಾಧಿಸಿದರು.

ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಐವತ್ತು ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು. ಸುಲಭ ಗೆಲುವಿನ ಉತ್ಸಾಹದೊಂದಿಗೆ ಶ್ರೀಲಂಕಾ ಗುರಿಯತ್ತ ನುಗ್ಗಿದಾಗ ಮಳೆ ಕಾಡಿತು. ಇದರಿಂದಾಗಿ ಡಕ್ವರ್ಥ್-ಲೂಯಿಸ್ ನಿಯಮದ ಲೆಕ್ಕಾಚಾರದಂತೆ ಗುರಿಯನ್ನು 47 ಓವರುಗಳಲ್ಲಿ 197 ರನ್ ಎಂದು ನಿರ್ಧರಿಸಲಾಯಿತು.

ಆತಿಥೇಯ ಲಂಕಾ ಕೇವಲ 42.3 ಓವರುಗಳಲ್ಲಿ 199 ರನ್ ಗಳಿಸುವ ಮೂಲಕ ವಿಜಯೋತ್ಸವ ಆಚರಿಸಿತು. ಅದು ಕಳೆದುಕೊಂಡಿದ್ದು ಎರಡು ವಿಕೆಟ್ ಮಾತ್ರ. ಆರಂಭಿಕ ಆಟಗಾರ ತರಂಗ ಅವರು ಅಜೇಯ ಆಟವಾಡಿದರು. ಆದ್ದರಿಂದ ಜಯದ ಹಾದಿ ಕಷ್ಟದ್ದಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: 50 ಓವರುಗಳಲ್ಲಿ 203 (ಕ್ರಿಸ್ ಗೇಲ್ 28, ಆ್ಯಡ್ರಿನ್ ಭರತ್ 12, ಡೇರನ್ ಬ್ರಾವೊ 39, ರಾಮನರೇಶ್ ಸರವಣ್ 21, ಡ್ವೇನ್ ಬ್ರಾವೊ 39, ಕಾರ್ಲಟನ್ ಬಗ್ ಔಟಾಗದೆ 28; ಲಸಿತ್ ಮಾಲಿಂಗ 30ಕ್ಕೆ3, ನುವಾನ್ ಕುಲಶೇಖರ 42ಕ್ಕೆ2, ಮುತ್ತಯ್ಯ ಮುರಳೀಧರನ್ 42ಕ್ಕೆ2, ರಂಗನ ಹೆರಾತ್ 33ಕ್ಕೆ1); ಡಕ್ವರ್ಥ್-ಲೂಯಿಸ್ ನಿಯಮದಂತೆ ಬದಲಾದ ಗೆಲುವಿನ ಗುರಿ 47 ಓವರುಗಳಲ್ಲಿ 197 ರನ್; ಶ್ರೀಲಂಕಾ: 42.3 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 199 (ಉಪುಲ್ ತರಂಗ ಔಟಾಗದೆ 101, ತಿಲಕರತ್ನೆ ದಿಲ್ಶಾನ್ 11, ಕುಮಾರ ಸಂಗಕ್ಕಾರ 20, ಮಹೇಲ ಜಯವರ್ಧನೆ ಔಟಾಗದೆ 48; ರವಿ ರಾಂಪಾಲ್ 27ಕ್ಕೆ1, ಡ್ವೇನ್ ಬ್ರಾವೊ 29ಕ್ಕೆ1); ಫಲಿತಾಂಶ: ಶ್ರೀಲಂಕಾಕ್ಕೆ 8 ವಿಕೆಟ್‌ಗಳ ಗೆಲುವು; ಮೂರು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ; ಪಂದ್ಯ ಶ್ರೇಷ್ಠ: ಉಪುಲ್ ತರಂಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.