ಹೈದರಾಬಾದ್ (ಪಿಟಿಐ): ಕೋಲ್ಕತ್ತ ನೈಟ್ ರೈಡರ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಸಾಮರ್ಸೆಟ್ ವಿರುದ್ಧ ಪೈಪೋಟಿ ನಡೆಸಲಿದೆ. ರೈಡರ್ಸ್ ತಂಡ ಮುಯ್ಯಿ ತೀರಿಸುವ ತವಕದೊಂದಿಗೆ ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.

ಬುಧವಾರ ಇದೇ ಮೈದಾನದಲ್ಲಿ ಇವೆರಡು ತಂಡಗಳು ಅರ್ಹತಾ ಹಂತದ ಪಂದ್ಯದಲ್ಲಿ ಎದುರಾಗಿದ್ದವು. ಆಗ ಇಂಗ್ಲೆಂಡ್‌ನ ಕೌಂಟಿ ತಂಡ ಸಾಮರ್ಸೆಟ್‌ಗೆ ಗೆಲುವು ಒಲಿದಿತ್ತು. ಸೋಲು ಅನುಭವಿಸಿದರೂ ಕೋಲ್ಕತ್ತ ಉತ್ತಮ ರನ್‌ರೇಟ್ ಆಧಾರದಲ್ಲಿ ಪ್ರಧಾನ ಹಂತಕ್ಕೆ ಅರ್ಹತೆ ಗಿಟ್ಟಿಸಿತ್ತು.

ಆದರೆ ಭಾನುವಾರ ನಡೆಯುವ ಪಂದ್ಯದಲ್ಲಿ ಎದುರಾಳಿಗಳನ್ನು ಮಣಿಸುವ ವಿಶ್ವಾಸವನ್ನು ಕೋಲ್ಕತ್ತ ಹೊಂದಿದೆ. ನಾಯಕ ಗೌತಮ್ ಗಂಭೀರ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಸಂಪೂರ್ಣ ಫಿಟ್‌ನೆಸ್ ಹೊಂದಿರದ ಕಾರಣ ಅರ್ಹತಾ ಪಂದ್ಯದಲ್ಲಿ ಗಂಭೀರ್ ಆಡಿರಲಿಲ್ಲ. ಅವರ ಬದಲು ಜಾಕ್ ಕಾಲಿಸ್ ತಂಡವನ್ನು ಮುನ್ನಡೆಸಿದ್ದರು.

ಸಾಮರ್ಸೆಟ್ ತಂಡ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಸಂಘಟಿತ ಹೋರಾಟ ನೀಡಲು ಸಾಧ್ಯವಾದದ್ದು ಇದಕ್ಕೆ ಕಾರಣ. ಪೀಟರ್ ಟ್ರೆಗೊ, ರೆಲೋಫ್ ವಾನ್ ಡೆರ್ ಮೆರ್ವ್ ಹಾಗೂ ನಾಯಕ ಅಲ್ಫೋನ್ಸೊ ಥಾಮಸ್ ಎದುರಾಳಿಗಳನ್ನು ಮತ್ತೆ ಕಾಡಿದರೆ ಅಚ್ಚರಿಯಿಲ್ಲ.

ವಾರಿಯರ್ಸ್ ಎದುರಾಳಿ ಸೌತ್ ಆಸ್ಟ್ರೇಲಿಯಾ: ದಿನದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಾರಿಯರ್ಸ್ ತಂಡ ಸೌತ್ ಆಸ್ಟ್ರೇಲಿಯಾ ರೆಡ್‌ಬ್ಯಾಕ್ಸ್ ತಂಡದ ಸವಾಲನ್ನು ಎದುರಿಸಲಿದೆ. ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ ಜಯ ಪಡೆದಿದ್ದ ವಾರಿಯರ್ಸ್ ಆತ್ಮವಿಶ್ವಾಸದಲ್ಲಿದೆ. ಸತತ ಎರಡನೇ ಗೆಲುವು ಪಡೆಯುವುದು ಈ ತಂಡದ ಗುರಿ.

ಇಂದಿನ ಪಂದ್ಯಗಳು: ವಾರಿಯರ್ಸ್- ಸೌತ್ ಆಸ್ಟ್ರೇಲಿಯಾ (ಸಂಜೆ 4.00 ಗಂಟೆಗೆ ಆರಂಭ); ಕೋಲ್ಕತ್ತ ನೈಟ್ ರೈಡರ್ಸ್- ಸಾಮರ್ಸೆಟ್ (ರಾತ್ರಿ 8.00ಕ್ಕೆ ಆರಂಭ)
ಸ್ಥಳ: ಹೈದರಾಬಾದ್; ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.