ಚಾಮರಾಜನಗರ: ಚಾಮರಾಜ ನಗರ ತಂಡವು ಇಲ್ಲಿಯ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದಲ್ಲಿ ಶುಭಾರಂಭ ಮಾಡಿತು.

ಜಿಲ್ಲಾ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆಯು ತ್ತಿರುವ ಟೂರ್ನಿಯಲ್ಲಿ ಚಾಮರಾಜ ನಗರ ತಂಡವು 29–21, 29–16ರಿಂದ ಬೆಂಗಳೂರಿನ ಕೆಪಿಟಿಸಿಎಲ್ ತಂಡದ ವಿರುದ್ಧ ಜಯಿಸಿತು. ಇನ್ನೊಂದು ಪಂದ್ಯದಲ್ಲಿ ಚಾಮರಾಜ ನಗರ ತಂಡವು 29–16, 29–15ರಿಂದ ಮೈಸೂರಿನ ಚಾಣಕ್ಯ ತಂಡದ ವಿರುದ್ಧ ಗೆದ್ದಿತು.

ಇನ್ನುಳಿದ ಪಂದ್ಯಗಳಲ್ಲಿ ಬನಶಂಕರಿ ತಂಡ, ಮೈಸೂರಿನ ರೂಸ್ಟಾರ್ ತಂಡಗಳು ಜಯಿಸಿವೆ.

ಮಹಿಳೆಯರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಸಂಸ್ಥೆಯ ಮೂರು ತಂಡಗಳೂ ಶುಭಾರಂಭ ಮಾಡಿವೆ. ಪುರುಷರ ವಿಭಾಗದಲ್ಲಿ 24 ಮತ್ತು ಮಹಿಳೆಯರ ವಿಭಾಗದಲ್ಲಿ 6 ತಂಡಗಳು ಭಾಗವಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.