ಲಂಡನ್: ಜಮೈಕ ತಂಡ ಲಂಡನ್ ಒಲಿಂಪಿಕ್ಸ್ ಅಥ್ಲೆಟಿಕ್ಸ್ನ ಪುರುಷರ 4x100 ಮೀ. ರಿಲೆ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೇ ಚಿನ್ನ ಗೆದ್ದುಕೊಂಡಿತು. ಇದರೊಂದಿಗೆ `ವೇಗದ ದೊರೆ~ ಉಸೇನ್ ಬೋಲ್ಟ್ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದರು.

ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಜಮೈಕ ತಂಡ 36.48 ಸೆಕೆಂಡ್ಗಳಲ್ಲಿ ಗುರಿ ತಲುಪಿತಲ್ಲದೆ, ನೂತನ ವಿಶ್ವದಾಖಲೆಯನ್ನೂ ತನ್ನ ಹೆಸರಿಗೆ ಬರೆಯಿಸಿಕೊಂಡಿತು. ಬೋಲ್ಟ್, ಯೊಹಾನ್ ಬ್ಲೇಕ್, ನೆಸ್ಟಾ ಕಾರ್ಟರ್ ಮತ್ತು ಮೈಕಲ್ ಫ್ರೇಟರ್ ಅವರನ್ನೊಳಗೊಂಡ ಜಮೈಕ ಅದ್ಭುತ ಪ್ರದರ್ಶನ ನೀಡಿತು.

ಜಮೈಕ ತಂಡ ಗೆಲುವು ಪಡೆದ ಕಾರಣ ಬೋಲ್ಟ್ಗೆ ಕೂಟದ ಮೂರನೇ ಬಂಗಾರ ದೊರೆಯಿತು. ಅವರು ಈ ಮೊದಲು 100 ಮೀ. ಮತ್ತು 200 ಮೀ. ಓಟದಲ್ಲಿ ಸ್ವರ್ಣ ಜಯಿಸಿದ್ದರು. ಬೀಜಿಂಗ್ ಕೂಟದಲ್ಲಿ ಈ ಮೂರೂ ವಿಭಾಗಗಳಲ್ಲಿ ಬೋಲ್ಟ್ ಬಂಗಾರ ತಮ್ಮದಾಗಿಸಿಕೊಂಡಿದ್ದರು.

`ಕೂಟವನ್ನು ಈ ರೀತಿಯಲ್ಲಿ ಮುಕ್ತಾಯಗೊಳಿಸಲು ಸಾಧ್ಯವಾಗಿರುವುದು ಸಂತಸ ಉಂಟುಮಾಡಿದೆ. ಇದೊಂದು ಅದ್ಭುತ ಅನುಭವ~ ಎಂದು ಬೋಲ್ಟ್ ಪ್ರತಿಕ್ರಿಯಿಸಿದರು. 37.04 ಸೆಕೆಂಡ್ಗಳಲ್ಲಿ ರಿಲೆ ಪೂರೈಸಿದ ಅಮೆರಿಕ ತಂಡ ಎರಡನೇ ಸ್ಥಾನ ಪಡೆದರೆ, ಕಂಚಿನ ಪದಕವನ್ನು ಟ್ರಿನಿಡಾಡ್ ಅಂಡ್ ಟೊಬ್ಯಾಗೊ ತಂಡ ತನ್ನದಾಗಿಸಿಕೊಂಡಿತು.

ಬೋಲ್ಟ್ ಮತ್ತು ಬ್ಲೇಕ್ ಅವರಂತಹ ಅಥ್ಲೀಟ್ಗಳು ಇರುವ ಕಾರಣ ಜಮೈಕ ಚಿನ್ನ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿತ್ತು. ಆದರೂ ಅಮೆರಿಕ ತಕ್ಕ ಪೈಪೋಟಿ ನೀಡಲು ಯಶಸ್ವಿಯಾಯಿತು. ಟಿ. ಕಿಮೊನ್ಸ್, ಜಸ್ಟಿನ್ ಗ್ಯಾಟ್ಲಿನ್, ಟೈಸನ್ ಗೇ ಮತ್ತು ರ್ಯಾನ್ ಬೈಲಿ ಅವರು ಅಮೆರಿಕ ತಂಡವನ್ನು ಪ್ರತಿನಿಧಿಸಿದ್ದರು.

ಜಮೈಕ ಪರ ಬೋಲ್ಟ್ ಹಾಗೂ ಅಮೆರಿಕ ಪರ ಬೈಲಿ ಕೊನೆಯವರಾಗಿ ಓಡಿದ್ದರು. ಜಮೈಕದ `ವೇಗದ ಓಟದ ರಾಜ~ ಮೊದಲಿಗರಾಗಿ ಗುರಿಮುಟ್ಟಿದಾಗ ಬೈಲಿ ಸಾಕಷ್ಟು ಹಿಂದೆ ಉಳಿದಿದ್ದರು. ಈ ಸಾಧನೆಯ ಮೂಲಕ ಬೋಲ್ಟ್ ಒಟ್ಟಾರೆಯಾಗಿ ಆರು ಒಲಿಂಪಿಕ್ಸ್ ಚಿನ್ನ ಗೆದ್ದಂತಾಗಿದೆ.

ಜಮೈಕ ತಂಡ ವಿಶ್ವದಾಖಲೆಯ ಶ್ರೇಯವನ್ನೂ ತನ್ನದಾಗಿಸಿಕೊಂಡಿತು. 2011 ರಲ್ಲಿ ಡೇಗುವಿನಲ್ಲಿ ನಡೆದಿದ್ದ ವಿಶ್ವಚಾಂಪಿಯನ್ಷಿಪ್ನಲ್ಲಿ 37.04 ಸೆ.ಗಳಲ್ಲಿ ಸ್ಥಾಪಿಸಿದ್ದ ವಿಶ್ವದಾಖಲೆಯನ್ನು ಜಮೈಕ ಮುರಿಯಿತು.

ಫರಾ ಮಿಂಚು: ಬ್ರಿಟನ್ನ ಮೊಹಮ್ಮದ್ ಫರಾ ಪುರುಷರ 5,000 ಮೀ. ಓಟದಲ್ಲೂ ಅಗ್ರಸ್ಥಾನ ಪಡೆದು ಸ್ವರ್ಣ `ಡಬಲ್~ ಗೌರವಕ್ಕೆ ಪಾತ್ರರಾದರು. ಸೋಮಾಲಿಯ ಮೂಲದ ಫರಾ ಈ ಮೊದಲು 10 ಸಾವಿರ ಮೀ. ಓಟದಲ್ಲಿ ಬಂಗಾರ ಜಯಿಸಿದ್ದರು. ಈ ಸಾಧನೆಯ ಮೂಲಕ ಅವರು ಬ್ರಿಟನ್ನ ಶ್ರೇಷ್ಠ ದೀರ್ಘ ದೂರದ ಓಟಗಾರ ಎಂಬ ಹೆಸರನ್ನು ತಮ್ಮದಾಗಿಸಿಕೊಂಡರು.

ಶನಿವಾರ ನಡೆದ ಸ್ಪರ್ಧೆಯಲ್ಲಿ ಫರಾ 13 ನಿಮಿಷ 41.66ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಇಥಿಯೋಪಿಯದ ಡೆಜೆನ್ ಗ್ಯಾಬ್ರೆಮೆಸೆಲ್ (13:41.98) ಮತ್ತು ಕೀನ್ಯಾದ ಥಾಮಸ್ ಲೊಂಗೊಸ್ವ (13:42.36) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.

ಒಲಿಂಪಿಕ್ಸ್ನ 5 ಸಾವಿರ ಮತ್ತು 10 ಸಾವಿರ ಮೀ. ಓಟದಲ್ಲಿ ಚಿನ್ನ ಗೆಲ್ಲುವ ಏಳನೇ ಅಥ್ಲೀಟ್ ಎಂಬ ಗೌರವ ಫರಾಗೆ ಒಲಿಯಿತು. `ನನಗೆ ಅಚ್ಚರಿಯಾಗಿದೆ. ಎರಡು ಚಿನ್ನದ ಪದಕ ಗೆಲ್ಲಬಹುದೆಂಬ ನಿರೀಕ್ಷೆ ಇರಲಿಲ್ಲ~ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸವಿನೋವಾಗೆ ಬಂಗಾರ: ದಕ್ಷಿಣ ಆಫ್ರಿಕಾದ ಕಾಸ್ಟರ್ ಸೆಮೆನ್ಯಾ ಒಡ್ಡಿದ ಸವಾಲನ್ನು ಮೆಟ್ಟಿನಿಂತ ರಷ್ಯಾದ ಮರಿಯಾ ಸವಿನೋವಾ ಮಹಿಳೆಯರ 800 ಮೀ. ಓಟದಲ್ಲಿ ಬಂಗಾರ ಜಯಿಸಿದರು. ಈ ವಿಭಾಗದಲ್ಲಿ ವಿಶ್ವಚಾಂಪಿಯನ್ ಎನಿಸಿರುವ ಸವಿನೋವಾ 1:56.19 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಒಂದು ನಿಮಿಷ 57.23 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಸೆಮೆನ್ಯಾ ಬೆಳ್ಳಿ ಪಡೆದರೆ, ರಷ್ಯಾದ ಏಕ್ತರೀನಾ ಪೊಸ್ಟೊಗೋವಾ (1:57.53) ಕಂಚು ತಮ್ಮದಾಗಿಸಿಕೊಂಡರು.

ಬೀಜಿಂಗ್ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಕೀನ್ಯಾದ ಪಮೆಲಾ ಜೆಲಿಮೊ (1:57.59) ನಾಲ್ಕನೇ ಸ್ಥಾನ ಪಡೆಯಲಷ್ಟೇ ಯಶ ಕಂಡರು.

ಅಮೆರಿಕ ತಂಡ ಮಹಿಳೆಯರ 4x400 ಮೀ. ರಿಲೆ ಚಿನ್ನ ತನ್ನದಾಗಿಸಿಕೊಂಡಿತು. ಡೀಡೀ ಟ್ರಾಟರ್, ಆ್ಯಲಿಸನ್ ಫೆಲಿಕ್ಸ್, ಫ್ರಾನ್ಸಿನಾ ಮೆಕ್ಕೊರೊರಿ ಮತ್ತು ಸಾನ್ಯಾ ರಿಚರ್ಡ್ಸ್ ರಾಸ್ ಅವರನ್ನೊಳಗೊಂಡ ಅಮೆರಿಕ ಮೂರು ನಿಮಿಷ 16.87 ಸೆಕೆಂಡ್ಗಳಲ್ಲಿ ಗುರಿ ತಲುಪಿತು. ರಷ್ಯಾ ತಂಡ ಬೆಳ್ಳಿ ಜಯಿಸಿದರೆ, ಕಂಚು ಜಮೈಕದ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.