ನವದೆಹಲಿ: ಭಾರತದ ಭರವಸೆಯ ಶೂಟರ್ ಜಿತು ರಾಯ್ ಅವರು ಐಎಸ್ ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿ ಯನ್‌ಷಿಪ್‌ನಲ್ಲಿ ಮತ್ತೊಂದು ಪದಕ ಜಯಿಸಿದ್ದಾರೆ.

50 ಮೀಟರ್ಸ್ ಪಿಸ್ತೂಲ್ ಸ್ಪರ್ಧೆ ಯಲ್ಲಿ ಬುಧವಾರ ಅವರು ಚಿನ್ನದ ಪದಕ ಗೆದ್ದರು. ಇದೇ ವಿಭಾಗದ ಬೆಳ್ಳಿ ಅಮನಪ್ರೀತ್ ಸಿಂಗ್ ಪಾಲಾಯಿತು.
ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯತ್ತಿರುವ ಟೂರ್ನಿಯಲ್ಲಿ ನೇಪಾಳ ಮೂಲದ ಜಿತು ಮಂಗಳವಾರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಜಯಿಸಿದ್ದರು. ಮಿಶ್ರ ತಂಡ ವಿಭಾಗದಲ್ಲಿ ಹೀನಾ ಸಿಧು ಜೊತೆ ಪದಕ ಗೆದ್ದಿದ್ದರು. ಮಿಶ್ರ ತಂಡ ವಿಭಾಗವನ್ನು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ನಡೆಸುತ್ತಿರುವ ಕಾರಣ ಆ ವಿಭಾಗದಲ್ಲಿ ಗೆದ್ದ ಪದಕ ಪಟ್ಟಿಯಲ್ಲಿ ಗಣನೆಗೆ ಬರುವುದಿಲ್ಲ.

ವಿಶ್ವ ದಾಖಲೆಯ ಸಾಧನೆ ಮಾಡಿದ ಜಿತು 230.1 ಪಾಯಿಂಟ್ಸ್ ಕಲೆ ಹಾಕಿ ಚಿನ್ನದ ಮೊದಲ ಕೊರಳಿಗೇರಿಸಿ ಕೊಂಡರು. ಪದಕದ ಸುತ್ತಿನ ಪೈಪೋಟಿ ಯಲ್ಲಿ ಮುಂಚೂಣಿಯಲ್ಲಿದ್ದ ಅಮನ ಪ್ರೀತ್ ನಂತರ ಎರಡನೇ ಸ್ಥಾನಕ್ಕೆ ಇಳಿ ದರು. ಅವರು ಅಂತಿಮವಾಗಿ 226.9 ಪಾಯಿಂಟ್ಸ್ ಗಳಿಸಿದರು. ಇರಾನ್‌ನ ಜಿ. ವಾಹಿದ್ 208 ಪಾಯಿಂಟ್ಸ್ ಪಡೆದು ಕಂಚು ಗೆದ್ದರು.

29 ವರ್ಷದ ಜಿತು ಮೊದಲ ಎರಡು ಸುತ್ತುಗಳ ಐದು ಅವಕಾಶಗಳು ಮುಗಿ ದಾಗ 93.8 ಪಾಯಿಂಟ್ಸ್‌ನಿಂದ ಆರನೇ ಸ್ಥಾನದಲ್ಲಿದ್ದರು. ಅಮನ್‌ಪ್ರೀತ್ 98.9 ಗಳಿಸಿ ಮುನ್ನಡೆ ಹೊಂದಿದ್ದರು. ಆದ್ದ ರಿಂದ ಚಿನ್ನದ ಪದಕಕ್ಕಾಗಿ ಭಾರತದ ಶೂಟರ್‌ಗಳ ನಡುವೆಯೇ ಪೈಪೋಟಿ ಏರ್ಪಟ್ಟಿತ್ತು. ಪಂಜಾಬ್‌ನ ಅಮನಪ್ರೀತ್ ಮುಂದಿನ ಸುತ್ತುಗಳಲ್ಲಿಯೂ ಪಾಯಿಂಟ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಸಾಗಿದರು. ಇದರಿಂದ ಒತ್ತಡಕ್ಕೆ ಒಳ ಗಾದಂತೆ ಕಂಡ ಜಿತು ಮರು ಹೋರಾಟ ಮಾಡಿದ ರೀತಿ ಅಮೋಘವಾದದ್ದು.

ಅಂತಿಮ ಹಂತದ ಸುತ್ತುಗಳು ಮುಗಿ ಯಲು ಬಾಕಿಯಿದ್ದಾಗ ಜಿತು ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾದರು. ಆದ್ದ ರಿಂದ ಅವರು ಆರರಿಂದ ಮೂರನೇ ಸ್ಥಾನಕ್ಕೆ ಮುನ್ನಡೆದರು. ಜಿತು 10.4 ಮತ್ತು 10 ಪಾಯಿಂಟ್ಸ್ ಕಲೆ ಹಾಕಿ ಮು ನ್ನಡೆ ಹೆಚ್ಚಿಸಿಕೊಂಡರು. ಅಮನ ಪ್ರೀತ್ ಉತ್ತಮ ಆರಂಭ ಪಡೆದರೂ ಚಿನ್ನದ ಪದಕದ ಹೊಸ್ತಿಲಿನಲ್ಲಿ ಎಡವಿದರು.

‘ತವರಿನ ಶೂಟಿಂಗ್ ಪ್ರೇಮಿಗಳ ಮುಂದೆ ಚಿನ್ನದ ಪದಕ ಜಯಿಸಿದ್ದಕ್ಕೆ ಖುಷಿ ಜೊತೆಗೆ ಅಚ್ಚರಿಯೂ ಆಗಿದೆ. ರಾಷ್ಟ್ರಧ್ವಜ ಜೊತೆ ಸಂಭ್ರಮಿಸುವ ಅವ ಕಾಶ ಮತ್ತೆ ಲಭಿಸಿದ್ದಕ್ಕೆ ಸಂತೋಷವಾ ಗಿದೆ. ನನಗೆ ಸಿಕ್ಕ ವಿಶೇಷ ಗೌರವವಿದು’ ಎಂದು ಜಿತು ಭಾವುಕರಾದರು. ಜಿತು 2014ರಲ್ಲಿ ಇಂಚೆನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದಿದ್ದರು. ಅದೇ ವರ್ಷ ಗ್ಲಾಸ್ಗೊ ಕಾಮನ್‌ವೆಲ್ತ್ ಕೂಟದಲ್ಲಿಯೂ ಚಿನ್ನದ ಸಾಧನೆ ಮಾಡಿದ್ದರು.

‘ಬುಧವಾರದ ಸ್ಪರ್ಧೆಯಲ್ಲಿ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಶೂಟಿಂಗ್ ಕ್ರೀಡೆಯಲ್ಲಿ ಯಾವ ಹಂತ ದಲ್ಲಿ ಏನು ಬೇಕಾದರೂ ಆಗಬಹುದು. ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ 2016ರ ವರ್ಷವನ್ನು ಮುಗಿ ಸಿದ್ದೆ. ಈಗ ಮತ್ತೆ ಪದಕ ಗೆಲ್ಲುವ ಮೂಲಕ ಹೊಸ ವರ್ಷ ಆರಂಭಿಸಿದ್ದೇನೆ. ರಾಷ್ಟ್ರಧ್ವಜವನ್ನು ಮತ್ತಷ್ಟು ಟೂರ್ನಿ ಗಳಲ್ಲಿ ಹೊದ್ದು ಸಂಭ್ರಮಿಸ ಬೇಕು ಎನ್ನುವ ಅಭಿಲಾಷೆಯಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.