ಕ್ಯಾಲಿಫೋರ್ನಿಯ (ರಾಯಿಟರ್ಸ್್): ಸರ್ಬಿಯದ ನೊವಾಕ್ ಜೊಕೊವಿಚ್ ಮತ್ತು ಇಟಲಿಯ ಫ್ಲೇವಿಯಾ ಪೆನೆಟಾ ಅವರು ಇಲ್ಲಿ ಕೊನೆಗೊಂಡ ಬಿಎನ್ಪಿ ಪಾರಿಬಾಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ವಿಶ್ವದ ಎರಡನೇ ರ್್ಯಾಂಕ್ನ ಆಟಗಾರ ಜೊಕೊವಿಚ್ 3-6, 6-3, 7-6 ರಲ್ಲಿ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಅವರನ್ನು ಮಣಿಸಿದರು.

ಜೊಕೊವಿಚ್ಗೆ ಇಲ್ಲಿ ದೊರೆತ ಮೂರನೇ ಪ್ರಶಸ್ತಿ ಇದು. ಅವರು 2008 ಮತ್ತು 2011 ರಲ್ಲಿ ಚಾಂಪಿಯನ್ ಆಗಿದ್ದರು. ಫೆಡರರ್ ಈ ಟೂರ್ನಿಯಲ್ಲಿ ನಾಲ್ಕು ಬಾರಿ (2004, 2005, 2006 ಮತ್ತು 2012) ಕಿರೀಟ ಮುಡಿಗೇರಿಸಿಕೊಂಡಿದ್ದರು.

ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಫೆಡರರ್ ಯಾವುದೇ ಸೆಟ್ ಕಳೆದುಕೊಳ್ಳದೆ ಫೈನಲ್ ಪ್ರವೇಶಿಸಿದ್ದರು. ಮಾತ್ರವಲ್ಲ, ಫೈನಲ್ ಪಂದ್ಯದ ಮೊದಲ ಸೆಟ್ಅನ್ನು ಸುಲಭದಲ್ಲಿ ತಮ್ಮದಾಗಿಸಿಕೊಂಡರು. ಆದರೆ ಎರಡು ಮತ್ತು ಮೂರನೇ ಸೆಟ್ಗಳಲ್ಲಿ ಪ್ರಭುತ್ವ ಮೆರೆದ ಜೊಕೊವಿಚ್ ಪ್ರಶಸ್ತಿ ಜಯಿಸಿದರು.

‘ಪಂದ್ಯ ಅತ್ಯಂತ ಕಠಿಣವಾಗಿತ್ತು. ಫೆಡರರ್ ವಿರುದ್ಧ ಆಡುವುದು ಹೆಮ್ಮೆಯ ಸಂಗತಿ’ ಎಂದು ಜೊಕೊವಿಚ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಪೆನೆಟಾ ಚಾಂಪಿಯನ್: ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಫ್ಲೇವಿಯಾ ಪೆನೆಟಾ 6-2, 6-1 ರಲ್ಲಿ ಪೋಲಂಡ್ನ ಅಗ್ನೀಸ್ಕಾ ರಡ್ವಾನ್ಸ್ಕಾ ವಿರುದ್ಧ ಸುಲಭ ಗೆಲುವು ಪಡೆದರು.

ಮಂಡಿನೋವಿನಿಂದ ಬಳಲಿದ ಅಗ್ನೀಸ್ಕಾ ಎಂದಿನ ಲಯದಲ್ಲಿ ಆಡಲು ವಿಫಲರಾದರು. ಇದರಿಂದ ಪೆನೆಟಾ ಗೆಲುವಿನ ಹಾದಿ ಸುಗಮವಾಯಿತು. ಇಟಲಿಯ ಆಟಗಾರ್ತಿ ವೃತ್ತಿಜೀವನದಲ್ಲಿ ಪಡೆದ ಅತಿ ದೊಡ್ಡ ಪ್ರಶಸ್ತಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.