ಪುಣೆ: ಕ್ರೀಡೆಯಲ್ಲಿ ಆಸಕ್ತಿಯೇ ಇರದ `ಅರ್ಹ' ಕೋಚ್ಗಳನ್ನು ಬದಿಗೆ ಕುಳ್ಳಿರಿಸಿ ಉನ್ನತ ಮಟ್ಟದ ಸಾಧನೆ ಮಾಡಿರುವ ಅನುಭವಿ ಕ್ರೀಡಾಪಟುಗಳನ್ನೇ ಕೋಚ್ಗಳನ್ನಾಗಿ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸತೊಂದು `ಪ್ರಯೋಗ' ನಡೆಸಿದೆ.

ಲಾಂಗ್ಜಂಪ್ ಒಲಿಂಪಿಯನ್ ಸಂಜಯ್ ರಾಯ್, 400 ಮೀಟರ್ಸ್ ಓಟದಲ್ಲಿ ಮಿಲ್ಕಾಸಿಂಗ್ ಅವರ ನಾಲ್ಕು ದಶಕಗಳಷ್ಟು ಹಳೆಯ ದಾಖಲೆಯನ್ನು ಹಿಂದಿಕ್ಕಿದ ಪರಮ್ಜಿತ್ ಸಿಂಗ್, ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಜಾವಲಿನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಕಾಶಿನಾಥ್ ನಾಯ್ಕ ಸೇರಿದಂತೆ ಕೆಲವರು ಇದೀಗ ಇಲ್ಲಿ ಕಿರಿಯರಿಗೆ ತರಬೇತಿ ನೀಡುವ ಕೈಂಕರ್ಯದಲ್ಲಿ ತಲ್ಲೆನರಾಗಿದ್ದಾರೆ. ಇವರಲ್ಲಿ ಯಾರಿಗೂ ತರಬೇತಿ ನೀಡಲು ಅಗತ್ಯವಾದ `ಎನ್ಐಎಸ್' ಅರ್ಹತೆ ಇಲ್ಲ!

ಇವರಲ್ಲಿ ಕಾಶಿನಾಥ್ ನಾಯ್ಕ ಕನ್ನಡಿಗರು. ಶಿರಸಿಗೆ ಸಮೀಪದ ಬೆಂಗ್ಲೆಯವರಾದ ಇವರು ಕೇವಲ ಕಳೆದ ಒಂದು ದಶಕದಲ್ಲಿ ಜಾವಲಿನ್ ಎಸೆತದಲ್ಲಿ ಎತ್ತರದ ಸಾಧನೆ ತೋರಿ ಗಮನ ಸೆಳೆದವರು. ಶಾಲಾ ಓದು ಮುಗಿಯುತ್ತಿದ್ದಂತೆಯೇ ಸೇನೆಗೆ ಸೇರಿದ ಇವರು ಅಲ್ಲಿ ಆಕಸ್ಮಿಕವಾಗಿ ಜಾವಲಿನ್ ಎಸೆತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಸೇನೆಯಲ್ಲಿ ಇದೀಗ ಸುಬೇದಾರ್ ಹುದ್ದೆಯಲ್ಲಿರುವ ಕಾಶಿನಾಥ್ `ಪ್ರಜಾವಾಣಿ' ಜತೆಗೆ ಈ ಬಗ್ಗೆ ಮಾತನಾಡಿ `ನನಗೆ ಆಗ 22 ವರ್ಷ ವಯಸ್ಸು. ಆವರೆಗೆ ನಾನು ಜಾವಲಿನ್ ಹೆಸರನ್ನೇ ಕೇಳಿರಲಿಲ್ಲ. ನಂತರ ಅದರಲ್ಲಿ ಸಾಕಷ್ಟು ತರಬೇತಿ, ಪರಿಶ್ರಮ ಹೊಂದಿದ ಮೇಲೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದಾಗ ನನಗೇ ಅಚ್ಚರಿ ಉಂಟಾಗಿತ್ತು. ನಂತರ ಕಾಮನ್ವೆಲ್ತ್ ಕೂಟದಲ್ಲಿ ಪದಕವೂ ಬಂದಿತು' ಎಂದರು.

ಇವರು ಬಲಭುಜದ ನೋವಿನ ಕಾರಣ ಕೆಲವು ಸಮಯ ಸ್ಪರ್ಧಿಸುವುದರಿಂದ ದೂರ ಉಳಿದಿದ್ದರು. ಈಚೆಗೆ ಇವರಿಗೆ ತರಬೇತಿಯ ಜವಾಬ್ದಾರಿ ನೀಡಲಾಗಿದೆ. ಇದು ಕಾಶಿನಾಥ್ಗೆ ಅಪಾರ ಖುಷಿ ನೀಡಿದೆ.

ಇದೀಗ ಏಷ್ಯಾ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುತ್ತಿರುವ ಜಾವಲಿನ್ ಎಸೆತಗಾರರ ಐದು ಮಂದಿಯ ತಂಡಕ್ಕೆ ಕಾಶಿನಾಥ್ ತರಬೇತಿ ನೀಡುತ್ತಿದ್ದಾರೆ.

`ಸಾಮಾನ್ಯವಾಗಿ ಕ್ರೀಡಾರಂಗದಲ್ಲಿ ಉನ್ನತ ಸಾಧನೆ ಮಾಡಿರುವವರು ಬ್ಯಾಂಕು, ರೈಲ್ವೇಸ್ ಮುಂತಾದ ಕಡೆ ಕೆಲಸಗಳಿಗೆ ಸೇರಿ ಕ್ರೀಡಾ ಚಟುವಟಿಕೆಗಳಿಂದ ದೂರವಾಗಿ ಬಿಡುತ್ತಾರೆ. ಆದರೆ ಕ್ರೀಡೆಯ ಬಗ್ಗೆ ಅಷ್ಟೇನೂ ಆಸಕ್ತಿ ಇರದ ಕೆಲವರು ಉದ್ಯೋಗದ ದೃಷ್ಟಿಯಿಂದಷ್ಟೇ ಪಟಿಯಾಲದಲ್ಲಿ ಎನ್ಐಎಸ್ ತರಬೇತಿ ಪಡೆದು ಕೋಚ್ಗಳಾಗಿ ಹೊರಬರುತ್ತಾರೆ. ಒಂದು ವರ್ಷದಲ್ಲಿ 24 ಕ್ರೀಡೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಅರ್ಹತಾ ಪತ್ರ ಪಡೆದು ಕೆಲಸಗಳನ್ನೂ ಪಡೆಯುತ್ತಾರೆ. ಇಂತಹವರನ್ನಷ್ಟೇ ನೆಚ್ಚಿಕೊಂಡರೆ ಕ್ರೀಡಾ ಪ್ರಗತಿ ಆಗದು ಎಂದು ಮನಗಂಡ ಸರ್ಕಾರ ಇದೀಗ ಕ್ರೀಡಾ ಸಾಧಕರನ್ನು ಉನ್ನತ ಮಟ್ಟದ ತರಬೇತಿಗೆ ನಿಯೋಜನೆ ಮಾಡುತ್ತಿದೆ' ಎಂದು ಕಾಶಿನಾಥ್ ಹೇಳಿದರು.

ಜಾವಲಿನ್ನಲ್ಲಿ ಸಮಬಲದ ಪೈಪೋಟಿ
ಪುಣೆ:  ಜಾವಲಿನ್ ಎಸೆತದ ಪುರುಷರ ವಿಭಾಗದಲ್ಲಿ ಭಾರತಕ್ಕೆ ಪದಕ ಬರುವ ಸಾಧ್ಯತೆಗಳು ನಿಚ್ಚಳವಾಗಿವೆಯಾದರೂ, ಸಮಬಲದ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ಭಾರತದ ಪುರುಷರ ತಂಡದಲ್ಲಿ ರಾಜಸ್ತಾನದ ಸಮರ್ಜಿತ್ (ಈ ಋತುವಿನಲ್ಲಿ 75ಮೀಟರ್ಸ್ ಸಾಧನೆ) ಮತ್ತು ಹರಿಯಾಣದ ರಾಜೇಂದ್ರ ಸಿಂಗ್ (78ಮೀ.) ಇದ್ದಾರೆ. ಉಜ್ಬೆಕಿಸ್ತಾನದ ಐವಾನ್ ಜೆತ್ಸೆವ್ (83.79ಮೀ.) ಹಾಗೂ ಬೊಬುರ್ ಶೊಕಿರ್ಜೊನೊವ್ (77.50ಮೀ.), ಶ್ರೀಲಂಕಾದ ಸಚಿತ್ ಮದುರಂಗಾ (78.52ಮೀ.), ಜಪಾನಿನ ಯೂಯಕೊರ್ಕಿ (77.84ಮೀ.) ಅವರಿಂದ ಭಾರತದ ಸ್ಪರ್ಧಿಗಳಿಗೆ ಸವಾಲು ಇರುವುದಂತೂ ಸ್ಪಷ್ಟ. ಆದರೆ ಏಷ್ಯಾದ ಅಗ್ರ ಮಾನ್ಯ ಜಾವಲಿನ್ ಎಸೆತಗಾರ ಜಪಾನಿನ ಯೂಕಿಫುಮು ಮುರಕಮಿ (ಕಳೆದ ಏಪ್ರಿಲ್ನಲ್ಲಿ 85.96ಮೀಟರ್ಸ್ ದೂರ ಎಸೆದ ಸಾಧನೆ) ಇಲ್ಲಿಗೆ ಬಾರದಿರುವುದರಿಂದ ಭಾರತದ ಸ್ಪರ್ಧಿಗಳ ಪದಕದ ಅವಕಾಶ ಹೆಚ್ಚಿದೆ.

ಮಹಿಳಾ ವಿಭಾಗದಲ್ಲಿ ಉತ್ತರ ಪ್ರದೇಶದ ಅನುರಾಣಿ (57ಮೀ.), ಸುಮನ್ ದೇವಿ (55ಮೀ.), ಹರಿಯಾಣದ ಮುಖೇಶ್ ಕುಮಾರಿ (53ಮೀ.) ಪೈಪೋಟಿ ನೀಡಲಿದ್ದಾರೆ. ಈಚೆಗೆ ಥಾಯ್ಲೆಂಡ್ನಲ್ಲಿ ನಡೆದ ಏಷ್ಯಾ ಗ್ರ್ಯಾನ್ಪ್ರಿ ಅಥ್ಲೆಟಿಕ್ಸ್ನಲ್ಲಿ ಮುಖೇಶ್ ಕುಮಾರಿ ಕಂಚು ಗೆದ್ದಿದ್ದರು. ಆದರೆ ಇಲ್ಲಿ ಚೀನಾದ ಲೀ ಲಿಂಗ್ವೆ (60.87ಮೀ.), ಜಾಂಗ್ಲೀ (60.83ಮೀ.), ಶ್ರೀಲಂಕಾದ ನಾಡಿಕಾ ಲಕ್ಮಲಿ (59.32ಮೀ.), ಜಪಾನಿನ ಕಿಹೊ ಕುಜೆ (58.98ಮೀ.) ಪೈಪೋಟಿ ಇರುವುದರಿಂದ ಭಾರತದ ವನಿತೆಯರಿಗೆ ಪದಕ ಬರುವುದು ಕಷ್ಟ.
ಭಾರತದ ಈ ಐದೂ ಮಂದಿಗೆ ಕರ್ನಾಟಕದ ಕಾಶಿನಾಥ್ ನಾಯ್ಕ ತರಬೇತಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.