ಗದಗ: ಇಲ್ಲಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೈಕಾ ರಾಜ್ಯಮಟ್ಟದ ಮಹಿಳಾ ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲಾ ಅಥ್ಲೀಟ್‌ಗಳು ಪಾರುಪತ್ಯ ಮೆರೆದು ಅರ್ಹವಾಗಿಯೇ ಸಮಗ್ರ ಚಾಂಪಿಯನ್ ಪ್ರಶಸ್ತಿ ಬಾಚಿಕೊಂಡರು.

ತುಮಕೂರಿನ ಆರ್.ಎ. ಮಂಜುಶ್ರೀ ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು. ಲಾಂಗ್ ಜಂಪ್ (ಪ್ರಥಮ), ಜಾವಲಿನ್ ಥ್ರೋ (ದ್ವಿತೀಯ), 100 ಮೀ. ಓಟ (ದ್ವಿತೀಯ)ದಲ್ಲಿ ಸಾಧನೆ ತೋರಿ 11 ಪಾಯಿಂಟ್‌ಗಳನ್ನು ಸಂಗ್ರಹಿಸಿದ್ದರು.
ಫಲಿತಾಂಶ: 3000 ಮೀ ಓಟ: ಪುಷ್ಪಲತಾ (ಮಂಡ್ಯ)-1, ಶ್ರಾವಣಿ (ಚಿತ್ರದುರ್ಗ)-2, ವೈಭವಿ (ಬೆಂಗಳೂರು)-3, 100 ಮೀ ಹರ್ಡಲ್ಸ್: ಪವಿತ್ರ (ಮೈಸೂರು)-1, ಅನಿತಾ (ಧಾರವಾಡ)-2, ಪ್ರಿಯಾಂಕ (ಬೆಂಗಳೂರು)-3, 4್ಡ100 ಮೀ ರಿಲೆ: ಮೈಸೂರು-1, ಧಾರವಾಡ-2, ಬೆಂಗಳೂರು-3, ಜಾವಲಿನ್ ಥ್ರೋ: ಶಹಜಾನಿ (ಮೈಸೂರು)-1, ಮಂಜುಶ್ರೀ (ತುಮಕೂರು)-2, ಶರ್ಮಿಳಾ (ಮೈಸೂರು)-3, ಟ್ರಿಪಲ್ ಜಂಪ್: ಎಸ್.ಎಲ್. ಸ್ವಾತಿ (ಮೈಸೂರು)-1, ಚಂದ್ರವ್ವ ಸನದಿ-2, ಸುರೇಖಾ ಪಾಟೀಲ (ಇಬ್ಬರೂ ಧಾರವಾಡ)-3.

ಭಾವನಾಗೆ ಪ್ರಶಸ್ತಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿ.ಎಂ. ಭಾವನಾ ನಗರದ ಜಗದ್ಗುರು ತೋಂಟದಾರ್ಯ ಕಾಲೇಜಿನ ಜಿಮ್ಖಾನ ಆವರಣದಲ್ಲಿ ನಡೆದ ಪೈಕಾ ರಾಜ್ಯಮಟ್ಟದ ಮಹಿಳಾ ಕ್ರೀಡಾಕೂಟದ ಟೇಬಲ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ 11-9, 9-11, 11-8 ಅಂತರದಲ್ಲಿ ತಮ್ಮೂರಿನವರೇ ಆದ ಎಸ್. ಹರಿಪ್ರಿಯ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.

ಡಬಲ್ಸ್‌ನ ಫೈನಲ್‌ನಲ್ಲಿ ಧಾರವಾಡದ ಅನುಷಾ ಕುಲಕರ್ಣಿ- ಸಹನಾ ಕುಲಕರ್ಣಿ ಸಹೋದರಿಯರು ಮಂಗಳೂರಿನ ಮೇಲಿಶಾ ಕ್ಯಾರೋಲ್ ಪಿಂಟೂ- ಅಧಿತಿ ಜೋಡಿಯನ್ನು 11-9, 11-8 ಅಂತರದಲ್ಲಿ ಸೋಲಿಸಿದರು.

ಷಟಲ್ ಬ್ಯಾಡ್ಮಿಂಟನ್: ಪೊಲೀಸ್ ಅತಿಥಿಗೃಹದ ಅಂಗಳದಲ್ಲಿ ನಡೆದ ಷಟಲ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರದ ಪೂರ್ವಿಶಾ ಎಸ್.ರಾಮ್ ತಮ್ಮೂರಿನವರೇ ಆದ ಪ್ರಿಯಾ ಶಂಕರ್ ಅವರನ್ನು 21-12 ಅಂತರದಲ್ಲಿ ಸೋಲಿಸಿದರು.

ಡಬಲ್ಸ್‌ನಲ್ಲಿ ಬೆಂಗಳೂರು ನಗರದ ಪೂರ್ವಿಶಾ ಎಸ್. ರಾಮ್-ಪ್ರಿಯಾ ಶಂಕರ್ ಅವರು ಬಳ್ಳಾರಿಯ ಜಯಲಕ್ಷ್ಮೀ-ಪ್ರಮೀಳಾ ಅವರನ್ನು 21-10, 21-9 ಅಂತರದಲ್ಲಿ ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.