ಕಾಕ್ಸ್ ಬಜಾರ್, ಬಾಂಗ್ಲಾದೇಶ (ಪಿಟಿಐ): ಮಿಥಾಲಿ ರಾಜ್ (ಅಜೇಯ 55) ಗಳಿಸಿದ ಅರ್ಧಶತಕ ಮತ್ತು ಶ್ರಾವಂತಿ ನಾಯ್ಡು (9ಕ್ಕೆ4) ಅವರ ಸಮರ್ಥ ಬೌಲಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ 16 ರನ್ಗಳ ಜಯ ಸಾಧಿಸಿತು.

ಶೇಖ್ ಕಮಾಲ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್ ಗಳಲ್ಲಿ ಒಂದು ವಿಕೆಟ್ಗೆ 101 ರನ್ ಗಳಿಸಿತು. ಆತಿಥೇಯ ತಂಡ 85 ರನ್ಗಳಿಗೆ ಅಲೌಟಾಯಿತು. ಈ ಗೆಲುವಿನ ಮೂಲಕ ಮಿಥಾಲಿ ರಾಜ್ ಬಳಗ ಮೂರು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಪಡೆಯಿತು.

ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ ತಂಡದ ಆರಂಭ ಉತ್ತಮವಾಗಿರಲಿಲ್ಲ. ಲತಿಕಾ ಕುಮಾರಿ (0) ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದರು.

ಬಳಿಕ ಜೊತೆಯಾದ ಮಿಥಾಲಿ ರಾಜ್ ಮತ್ತು ಪೂನಮ್ ರಾವತ್ ಬಾಂಗ್ಲಾ ಬೌಲರ್ಗಳ ಮೇಲೆ ಪ್ರಭುತ್ವ ಸಾಧಿಸಿದರು. ಮುರಿಯದ ಎರಡನೇ ವಿಕೆಟ್ಗೆ 98 ರನ್ ಸೇರಿಸಿದ ಇವರು ಭಾರತದ ಉತ್ತಮ ಮೊತ್ತಕ್ಕೆ ಕಾರಣ ರಾದರು.
64 ಎಸೆತ ಎದುರಿಸಿದ ಮಿಥಾಲಿ ನಾಲ್ಕು ಬೌಂಡರಿ ಗಳಿಸಿದರು. ಪೂನಮ್ 46 ಎಸೆತಗಳನ್ನು ಎದುರಿಸಿ ಎರಡು ಬೌಂಡರಿ ಗಳಿಸಿದರು.

ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾ ಕೂಡಾ ಆರಂಭದಲ್ಲೇ ಆಘಾತ ಅನುಭವಿಸಿತು. ಶಿಖಾ ಪಾಂಡೆ ಅವರು ಶಮೀಮಾ ಸುಲ್ತಾನಾ (4) ವಿಕೆಟ್ ಪಡೆದು ಭಾರತಕ್ಕೆ ಮೇಲುಗೈ ತಂದಿತ್ತರು.

ಆಯೆಷಾ ರಹಮಾನ್ (18) ಮತ್ತು ಸಾಜಿದಾ ಇಸ್ಲಾಮ್ (15) ಎರಡನೇ ವಿಕೆಟ್ಗೆ 35 ರನ್ ಸೇರಿಸಿ ತಂಡಕ್ಕೆ ಆಸರೆಯಾಗುವ ಪ್ರಯತ್ನ ನಡೆಸಿದರು. ಸಾಜಿದಾ ರನೌಟ್ ಆಗುವುದರೊಂದಿಗೆ ಈ ಜೊತೆ ಯಾಟಕ್ಕೆ ತೆರೆಬಿತ್ತು.
ಆ ಬಳಿಕ ಆಗಿಂದಾಗ್ಗೆ ವಿಕೆಟ್ಗಳನ್ನು ಕಳೆದುಕೊಂಡ ಬಾಂಗ್ಲಾ ಸೋಲಿನ ಹಾದಿ ಹಿಡಿಯಿತು.

ಮೂರು ಓವರ್ಗಳಲ್ಲಿ 9 ರನ್ ನೀಡಿ ನಾಲ್ಕು ವಿಕೆಟ್ ಪಡೆದ ಎಡಗೈ ಸ್ಪಿನ್ನರ್ ಶ್ರಾವಂತಿ ನಾಯ್ಡು ಬಾಂಗ್ಲಾ ತಂಡದ ಕುಸಿತಕ್ಕೆ ಕಾರಣರಾದರು. ಸಿಕಂದರಾ ಬಾದ್ನ ಶ್ರಾವಂತಿ ತಮ್ಮ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವನ್ನಾಗಿಸಿ ಕೊಂಡರು. ಶ್ರಾವಂತಿಗೆ ಉತ್ತಮ ಬೆಂಬಲ ನೀಡಿದ ಗೌಹರ್ ಸುಲ್ತಾನಾ ನಾಲ್ಕು ಓವರ್ಗಳಲ್ಲಿ ಕೇವಲ 11 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್: ಭಾರತ: 20 ಓವರ್ಗಳಲ್ಲಿ 1 ವಿಕೆಟ್ಗೆ 101 (ಮಿಥಾಲಿ ರಾಜ್ ಔಟಾಗದೆ 55, ಪೂನಮ್ ರಾವತ್ ಔಟಾಗದೆ 42, ಜಹಾನರ ಆಲಮ್ 12ಕ್ಕೆ 1)

ಬಾಂಗ್ಲಾದೇಶ: 20 ಓವರ್ಗಳಲ್ಲಿ 85 (ಆಯೆಷಾ ರಹಮಾನ್ 18, ಸಾಜಿದಾ ಇಸ್ಲಾಮ್ 15, ರುಮಾನಾ ಅಹ್ಮದ್ 21, ಶ್ರಾವಂತಿ ನಾಯ್ಡು 9ಕ್ಕೆ 4, ಗೌಹರ್ ಸುಲ್ತಾನಾ 11ಕ್ಕೆ 2, ಜೂಲನ್ ಗೋಸ್ವಾಮಿ 14ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.