ಮಿಯಾಮಿ (ರಾಯಿಟರ್ಸ್): ಲೆಬ್ರಾನ್ ಜೇಮ್ಸ ತೋರಿದ ಅದ್ಭುತ ಪ್ರದರ್ಶನದ ಬಲದಿಂದ ಮಿಯಾಮಿ ಹೀಟ್ ತಂಡವು ಅಮೆರಿಕದ ನ್ಯಾಷನಲ್ ಬ್ಯಾಸ್ಕೆಟ್ಬಾಲ್ ಲೀಗ್ನ (ಎನ್ಬಿಎ) ಕಿರೀಟ ಮುಡಿಗೇರಿಸಿಕೊಂಡಿತು.

ಗುರುವಾರ ರಾತ್ರಿ ನಡೆದ `ಬೆಸ್ಟ್ ಆಫ್ 7' ಫೈನಲ್ ಹಣಾಹಣಿಯ ಕೊನೆಯ ಪಂದ್ಯದಲ್ಲಿ ಮಿಯಾಮಿ ಹೀಟ್ 95-88 ರಲ್ಲಿ ಸ್ಯಾನ್ ಆ್ಯಂಟಾನಿಯೊ ಸ್ಪರ್ಸ್ ವಿರುದ್ಧ ರೋಚಕ ಗೆಲುವು ಪಡೆಯಿತು. ಈ ಮೂಲಕ ಏಳು ಪಂದ್ಯಗಳ ಫೈನಲ್ ಸರಣಿಯನ್ನು 4-3 ರಲ್ಲಿ ಗೆದ್ದುಕೊಂಡು ಚಾಂಪಿಯನ್ಪಟ್ಟವನ್ನು ತನ್ನದಾಗಿಸಿಕೊಂಡಿತು.

ಮೊದಲ ಆರು ಪಂದ್ಯಗಳ ಬಳಿಕ ಉಭಯ ತಂಡಗಳು 3-3 ರಲ್ಲಿ ಸಮಬಲ ಸಾಧಿಸಿದ್ದವು. ಇದರಿಂದ ಗುರುವಾರ ನಡೆದ ಪಂದ್ಯ ನಿರ್ಣಾಯಕ ಎನಿಸಿತ್ತು. ಲೆಬ್ರಾನ್ ಜೇಮ್ಸ 37 ಪಾಯಿಂಟ್ ಕಲೆ ಹಾಕಿ ತಂಡದ ಗೆಲುವಿನ ರೂವಾರಿ ಎನಿಸಿದರು. ಜೇಮ್ಸ ಫೈನಲ್ನ ಏಳು ಪಂದ್ಯಗಳಲ್ಲಿ 25.3 ಸರಾಸರಿಯಲ್ಲಿ ಪಾಯಿಂಟ್ ಕಲೆಹಾಕಿದ್ದಾರೆ.

ಮಿಯಾಮಿ ತಂಡ ಸತತ ಎರಡನೇ ವರ್ಷ ಎನ್ಬಿಎ ಕಿರೀಟ ಮುಡಿಗೇರಿಸಿದ ಸಾಧನೆ ಮಾಡಿದೆ. 2012 ರ ಫೈನಲ್ನಲ್ಲಿ ಓಕ್ಲಹಾಮಾ ತಂಡವನ್ನು ಮಣಿಸಿತ್ತು. ಅದಕ್ಕೂ ಮುನ್ನ 2006 ರಲ್ಲಿ ಪ್ರಶಸ್ತಿ ಜಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.