ಹೈದರಾಬಾದ್ (ಪಿಟಿಐ): ಯೂಸುಫ್ ಪಠಾಣ್ (ಅಜೇಯ 47; 26 ಎಸೆತ, 3 ಬೌ. 3 ಸಿ.) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡದವರು ಮಂಗಳವಾರ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 20 ರನ್ಗಳ ಅಂತರದಿಂದ ಡೆಕ್ಕನ್ ಚಾರ್ಜರ್ಸ್ ವಿರುದ್ಧ ವಿಜಯ ಸಾಧಿಸಿದರು.

ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೈಟ್ ರೈಡರ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಪೇರಿಸಿತು.

ಈ ಮೊತ್ತ ಬೆನ್ನಟ್ಟಿರುವ ಡೆಕ್ಕನ್ ಚಾರ್ಜರ್ಸ್ ತನ್ನ ಪಾಲಿನ ಓವರುಗಳು ಮುಗಿಯುವ ಹೊತ್ತಿಗೆ 6 ವಿಕೆಟ್ ನಷ್ಟಕ್ಕೆ 149 ರನ್ ಮಾತ್ರ ಗಳಿಸಿತು.. ಆರಂಭಿಕ ಬ್ಯಾಟ್ಸ್ಮನ್ಗಳಾದ ಸನ್ನಿ ಸೊಹಾಲ್ ಹಾಗೂ ಶಿಖರ್ ಧವನ್ ( (54; 45 ಎ., 4 ಬೌಂಡರಿ, 1 ಸಿಕ್ಸರ್) ಉತ್ತಮ ಆರಂಭ ನೀಡಿದರು. ಆದರೆ ಎಡಗೈ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ ತಮ್ಮ ಒಂದೇ ಓವರ್ನಲ್ಲಿ ಸೊಹಾಲ್ ಹಾಗೂ ನಾಯಕ ಕುಮಾರ ಸಂಗಕ್ಕಾರ ವಿಕೆಟ್ ಪಡೆದು ತಮ್ಮ ತಂಡ ಮೇಲುಗೈ ಸಾಧಿಸಲು ಕಾರಣರಾದರು.

ಮೊದಲು ಬ್ಯಾಟ್ ಮಾಡಿದ ನೈಟ್ ರೈಡರ್ಸ್ ಪರ ಎರಡನೇ ವಿಕೆಟ್ನಲ್ಲಿ ಜೊತೆಗೂಡಿದ ಕಾಲಿಸ್ (31; 30 ಎಸೆತ) ಹಾಗೂ ನಾಯಕ ಗೌತಮ್ ಗಂಭೀರ್ (35; 22 ಎಸೆತ) ವೇಗವಾಗಿ ರನ್ ಗಳಿಸಿದರು. ಇವರಿಬ್ಬರು 32 ಎಸೆತಗಳಲ್ಲಿ 43 ರನ್ ಕಲೆಹಾಕಿದರು. ಆದರೆ ಈ ಆಟಗಾರರು ಐದು ರನ್ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಯೂಸುಫ್ ಪಠಾಣ್ ಹಾಗೂ ಮನೋಜ್ ತಿವಾರಿ (33; 28 ಎಸೆತ, 3 ಬೌಂ, 1 ಸಿ.)ಇನಿಂಗ್ಸ್ಗೆ ತಿರುವು ನೀಡಿ, ಜಯಕ್ಕೆ ಕಾರಣರಾದರು.

ಸ್ಕೋರು ವಿವರ
ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 169
ಎಯೋನ್ ಮೊರ್ಗನ್ ಬಿ ಡೇನಿಯಲ್ ಕ್ರಿಸ್ಟಿಯನ್ 14
ಜಾಕ್ ಕಾಲಿಸ್ ಸಿ ರವಿತೇಜಾ ಬಿ ಅಮಿತ್ ಮಿಶ್ರಾ 30
ಗೌತಮ್ ಗಂಭೀರ್ ಸಿ ಸಂಗಕ್ಕಾರ ಬಿ ಪ್ರಗ್ಯಾನ್ ಓಜಾ 35
ಯೂಸುಫ್ ಪಠಾಣ್ ಔಟಾಗದೆ 47
ಮನೋಜ್ ತಿವಾರಿ ಸಿ ಧವನ್ ಬಿ ಡೇಲ್ ಸ್ಟೇನ್ 33
ಮಾರ್ಕ್ ಬೌಷರ್ ಔಟಾಗದೆ 00
ಇತರೆ: (ಲೆಗ್ಬೈ-4, ವೈಡ್-4, ನೋಬಾಲ್-2) 10
ವಿಕೆಟ್ ಪತನ: 1-36 (ಮೊರ್ಗನ್; 5.4); 2-79 (ಕಾಲಿಸ್; 10.6); 3-84 (ಗಂಭೀರ್; 11.4); 4-164 (ತಿವಾರಿ; 19.4)
ಬೌಲಿಂಗ್: ಡೇನಿಯಲ್ ಕ್ರಿಸ್ಟಿಯನ್ 4-0-39-1 (ನೋಬಾಲ್-1, ವೈಡ್-3), ಡೇಲ್ ಸ್ಟೇನ್ 4-0-31-1, ಇಶಾಂತ್ ಶರ್ಮ 4-0-37-0 (ನೋಬಾಲ್-1), ಶಿಖರ್ ಧವನ್ 1-0-4-0, ಪ್ರಗ್ಯಾನ್ ಓಜಾ 4-0-32-1, ಅಮಿತ್ ಮಿಶ್ರಾ 3-0-22-1 (ವೈಡ್-1).

ಡೆಕ್ಕನ್ ಚಾರ್ಜರ್ಸ್: 20 ಓವರುಗಳಲ್ಲಿ
6 ವಿಕೆಟ್ಗಳ ನಷ್ಟಕ್ಕೆ 149
ಸನ್ನಿ ಸೋಹಲ್ ಸಿ ಮಾರ್ಗನ್ ಬಿ ಇಕ್ಬಾಲ್ ಅಬ್ದುಲ್ಲಾ 26
ಶಿಖರ್ ಧವನ್ ಬಿ ಜಾಕ್ ಕಾಲಿಸ್ 54
ಕುಮಾರ ಸಂಗಕ್ಕಾರ ಸಿ ಕಾಲಿಸ್ ಬಿ ಅಬ್ದುಲ್ಲಾ 00
ಕೆಮರೂನ್ ವೈಟ್ ಬಿ ರಜತ್ ಭಾಟಿಯಾ 13
ಡೇನಿಯಲ್ ಕ್ರಿಸ್ಟಿಯನ್ ಎಲ್ಬಿಡಬ್ಲ್ಯು ಬಿ ಭಾಟಿಯಾ 01
ರವಿ ತೇಜ ಬಿ ಬ್ರೆಟ್ ಲೀ 30
ಭರತ್ ಚಿಪ್ಲಿ ಔಟಾಗದೆ 12
ಅಮಿತ್ ಮಿಶ್ರಾ ಔಟಾಗದೆ 09
ಇತರೆ: (ಬೈ-1, ವೈಡ್-2, ನೋಬಾಲ್-1) 04
ವಿಕೆಟ್ ಪತನ: 1-41 (ಸನ್ನಿ ಸೋಹಲ್; 5.3), 2-41 (ಕುಮಾರ ಸಂಗಕ್ಕಾರ; 5.5), 3-68 (ಕೆಮರೂನ್ ವೈಟ್; 10.1), 4-70 (ಡೇನಿಯಲ್ ಕ್ರಿಸ್ಟಿಯನ್; 10.5), 5-126 (ರವಿ ತೇಜ; 16.6), 6-128 (ಶಿಖರ್ ಧವನ್; 17.3).
ಬೌಲಿಂಗ್: ಬ್ರೆಟ್ ಲೀ 4-0-30-1, ಲಕ್ಷ್ಮೀಪತಿ ಬಾಲಾಜಿ 3-0-27-0 (ನೋಬಾಲ್-1), ಇಕ್ಬಾಲ್ ಅಬ್ದುಲ್ಲಾ 4-0-34-2, ರಜತ್ ಭಾಟಿಯಾ 4-0-26-2, ಯೂಸುಫ್ ಪಠಾಣ್ 3-0-19-0 (ವೈಡ್-1), ಜಾಕ್ ಕಾಲಿಸ್ 2-0-12-1 (ವೈಡ್-1).

ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್ಗೆ 20 ರನ್ಗಳ ಗೆಲುವು; ಪಂದ್ಯ ಪುರುಷೋತ್ತಮ: ಯೂಸುಫ್ ಪಠಾಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.