ಮಾಸ್ಕೊ: ಭಾರತದ ಬಸಂತ್ ಬಹಾದೂರ್ ರಾಣಾ ಇಲ್ಲಿ ನಡೆಯುತ್ತಿರುವ ಹದಿನಾಲ್ಕನೇ ವಿಶ್ವ ಅಥ್ಲೆಟಿಕ್ಸ್ನ ಪುರುಷರ 50 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ 33ನೇ ಸ್ಥಾನ ಪಡೆದರು.

ಬುಧವಾರ ನಡೆದ ಸ್ಪರ್ಧೆಯಲ್ಲಿ ಬಸಂತ್ 3 ಗಂಟೆ 58 ನಿಮಿಷ ಹಾಗೂ 20 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಕಣದಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಸಂದೀಪ್ ಕುಮಾರ್ ಅನರ್ಹಗೊಂಡರು. ಅರ್ಧಹಾದಿ ತಲುಪಿದ್ದ ವೇಳೆ ಸಂದೀಪ್ 45ನೇ ಸ್ಥಾನದಲ್ಲಿದ್ದರು.

ಹೋದ ವರ್ಷ ನಡೆದ ಲಂಡನ್ ಒಲಿಂಪಿಕ್ಸ್ನಲ್ಲಿ ಬಸಂತ್ 36ನೇ ಸ್ಥಾನ ಪಡೆದಿದ್ದರು. ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಕೂಡಾ (3:56.48) ಬಸಂತ್ ಹೆಸರಿನಲ್ಲಿದೆ.

ಐರ್ಲೆಂಡ್ನ ರಾಬರ್ಟ್ ಹೆಫೆರ್ಮನ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಅವರು 3 ಗಂಟೆ 37 ನಿಮಿಷ 56 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ವಿಶ್ವ ಅಥ್ಲೆಟಿಕ್ಸ್ನಲ್ಲಿ ಐರ್ಲೆಂಡ್ಗೆ 30 ವರ್ಷಗಳ ಬಳಿಕ ದೊರೆತ ಮೊದಲ ಚಿನ್ನದ ಪದಕ ಇದು.

ರಷ್ಯಾದ ಮಿಖಾಯಿಲ್ ರೈಜೋವ್ (3:38.58 ಸೆ.) ಹಾಗೂ ಆಸ್ಟ್ರೇಲಿಯಾದ ಜಾರೆಡ್ ಟಾಲೆಂಟ್ (3:40.03) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.

ಮುಂದಿನ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವೆ: ನಿವೃತ್ತಿಯ ಬಗ್ಗೆ ಇನ್ನೂ ಚಿಂತಿಸಿಲ್ಲ ಎಂದಿರುವ ರಷ್ಯಾದ ಮಹಿಳಾ ಪೋಲ್ವಾಲ್ಟ್ ಸ್ಪರ್ಧಿ ಯೆಲೆನಾ ಇಸಿನ್ಬಯೆವಾ, ಮುಂಬರುವ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ವಿಶ್ವಾಸ ಹೊಂದಿದ್ದೇನೆ ಎಂದಿದ್ದಾರೆ.

ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಇಸಿನ್ಬಯೆವಾ 4.89 ಮೀ. ಎತ್ತರ ಜಿಗಿದು ಚಿನ್ನ ಜಯಿಸಿದ್ದರು. ಈ ಸಾಧನೆಯೊಂದಿಗೆ ರಷ್ಯಾದ ಈ ಚಾಂಪಿಯನ್ ಅಥ್ಲೀಟ್ ನಿವೃತ್ತಿ ಪ್ರಕಟಿಸುವರು ಎಂದು ಭಾವಿಸಲಾಗಿತ್ತು.

`ನಾನು ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ. ಆದರೆ ಈ ಋತುವಿನ ಕೊನೆಯಲ್ಲಿ ಅಲ್ಪ ಬಿಡುವು ಪಡೆದು ಮಗುವನ್ನು ಪಡೆಯುವುದು ನನ್ನ ಯೋಜನೆ. ಆ ಬಳಿಕ ಮತ್ತೆ ಸ್ಪರ್ಧಾ ಕಣಕ್ಕಿಳಿಯುವೆ. ರಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವುದು ನನ್ನ ಗುರಿ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ನನ್ನನ್ನು ನೀವು ಮುಂದಿನ ಒಲಿಂಪಿಕ್ಸ್ನಲ್ಲಿ ಕಾಣಬಹುದು. ಇಲ್ಲದಿದ್ದರೆ ವಿದಾಯ ಪ್ರಕಟಿಸುವೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.