ಕಿಂಗ್‌ಸ್ಟನ್ (ಐಎಎನ್‌ಎಸ್): ನೂರು ಮೀಟರ್ಸ್ ಓಟದ ಹಾಲಿ ಚಾಂಪಿಯನ್ ಜಮೈಕಾದ ಯೋಹಾನ್ ಬ್ಲೇಕ್ ಮಾಸ್ಕೊದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ. ಸ್ನಾಯುಸೆಳೆತದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಉದ್ದೀಪನ ಮದ್ದು ಸೇವನೆ ವಿವಾದಕ್ಕೆ ಒಳಗಾಗಿರುವ ಅಮೆರಿಕದ ಟೈಸನ್ ಗೇ ಹಾಗೂ ಜಮೈಕಾದ ಅಸಾಫಾ ಪೊವೆಲ್ ಕೂಡ ಈಗಾಗಲೇ ಈ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ.

ಎರಡು ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ಡೆಗುವಿನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 100 ಮೀಟರ್ಸ್ ಓಟದಲ್ಲಿ ಬ್ಲೇಕ್ ಚಿನ್ನದ ಪದಕ ಜಯಿಸಿದ್ದರು. ಆ ಚಾಂಪಿಯನ್‌ಷಿಪ್‌ನಲ್ಲಿ ಜಮೈಕಾದವರೇ ಆದ ಉಸೇನ್ ಬೋಲ್ಟ್ ಅನರ್ಹಗೊಂಡಿದ್ದರು.

23 ವರ್ಷ ವಯಸ್ಸಿನ ಬ್ಲೇಕ್ ವಿಶ್ವ ದಾಖಲೆಯ ಓಟಗಾರ ಬೋಲ್ಟ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಪ್ರಬಲ ಪೈಪೋಟಿವೊಡ್ಡಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅಷ್ಟು ಮಾತ್ರವಲ್ಲದೇ, 100 ಮೀಟರ್ಸ್ ದೂರವನ್ನು ಅತಿ ವೇಗವಾಗಿ ಕ್ರಮಿಸಿದ ಎರಡನೇ ಅಥ್ಲೀಟ್ ಬ್ಲೇಕ್ (9.69 ಸೆಕೆಂಡ್). ವಿಶ್ವ ದಾಖಲೆ ಬೋಲ್ಟ್ (9.58 ಸೆಕೆಂಡ್) ಹೆಸರಿನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.