ಅಡಿಲೇಡ್: ತ್ರಿಕೋನ ಸರಣಿಯ ಮೂರು ಪಂದ್ಯಗಳ ಫೈನಲ್ ಪೈಪೋಟಿಯಲ್ಲಿ ಶ್ರೀಲಂಕಾ ಸಮಬಲ ಸಾಧಿಸಿದೆ. ಆದ್ದರಿಂದ ಮತ್ತೊಂದು ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಕಾಯಲೇಬೇಕು. ಅದೇ ನಿರ್ಣಾಯಕ ಅಂತಿಮ ಹಣಾಹಣಿಯೂ ಹೌದು.

ಮೊದಲ ಪಂದ್ಯದಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ ಇನ್ನೇನು ಮತ್ತೊಂದು ಯಶಸ್ಸಿ ಹೆಜ್ಜೆ ಇಡುತ್ತದೆ ಎನ್ನುವ ನಿರೀಕ್ಷೆ ಮಂಗಳವಾರ ಹುಸಿಯಾಯಿತು. ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಬಲ ತೋರದ ಕಾಂಗರೂಗಳ ಪಡೆಗೆ ನಿರಾಸೆ. ಜೊತೆಯಾಟಗಳು ಬೆಳೆಯಲು ಕಾರಣರಾದ ಶತಕ ವೀರ ತಿಲಕರತ್ನೆ ದಿಲ್ಶಾನ್ ಅಬ್ಬರದಿಂದ ಆತಿಥೇಯರ ಕನಸು ನುಚ್ಚುನೂರು.

ಉತ್ತಮ ಮೊತ್ತದ ಸವಾಲು ಮುಂದಿದ್ದರೂ ಅದನ್ನು ಮುಟ್ಟುವ ಧೈರ್ಯ ತೋರಿದ ಶ್ರೀಲಂಕಾದವರು ಇನ್ನೂ 34 ಎಸೆತಗಳು ಬಾಕಿ ಇರುವಂತೆಯೇ ಎಂಟು ವಿಕೆಟ್ಗಳ ಅಂತರದ ಗೆಲುವಿನ ಸಂಭ್ರಮ. ಆಗ ಆಸೀಸ್ ಪಡೆಯ ನಾಯಕ ಮೈಕಲ್ ಕ್ಲಾರ್ಕ್ ದೂರಿದ್ದು ತಮ್ಮ ಬೌಲರ್ಗಳನ್ನು ಹಾಗೂ ಬಿಗಿಗೊಳ್ಳದ ಕ್ಷೇತ್ರರಕ್ಷಣೆಯನ್ನು.

ಆಸ್ಟ್ರೇಲಿಯಾ ಬ್ಯಾಟಿಂಗ್ ನಿರಾಸೆಗೊಳ್ಳುವಂತಿರಲಿಲ್ಲ. ತನ್ನ ಪಾಲಿನ ಐವತ್ತು ಓವರುಗಳಲ್ಲಿ ಅದು ಆರು ವಿಕೆಟ್ಗಳನ್ನು ಕಳೆದುಕೊಂಡು ಗಳಿಸಿದ್ದು 271 ರನ್. ಆದರೆ ಈ ಮೊತ್ತದ ಗಡಿಯೊಳಗೆ ಸಿಂಹಳೀಯರನ್ನು ಕಟ್ಟಿ ಹಾಕುವುದು ಮಾತ್ರ ಭಾರಿ ಕಷ್ಟವಾಯಿತು. ಎರಡು ದೊಡ್ಡ ಜೊತೆಯಾಟಗಳಿಂದ ಪುಟಿದೆದ್ದು ನಿಂತ ಲಂಕಾ 44.2 ಓವರುಗಳಲ್ಲಿ 274 ರನ್ ಗಳಿಸಿತು. ಕಳೆದುಕೊಂಡಿದ್ದು ಕೇವಲ ಎರಡು ವಿಕೆಟ್.

ಫೈನಲ್ನ ಎರಡನೇ ಪಂದ್ಯದಲ್ಲಿ ವಿಶ್ವಾಸಪೂರ್ಣ ವಿಜಯ ಸಾಧಿಸಿದ ಲಂಕಾ 1-1ರಲ್ಲಿ ಆಸೀಸ್ಗೆ ಸಮನಾಗಿ ನಿಂತಿದೆ. ಆದ್ದರಿಂದ ಗುರುವಾರ ಇಲ್ಲಿಯೇ ನಡೆಯುವ ಮೂರನೇ ಪಂದ್ಯದ ಮಹತ್ವ ಹೆಚ್ಚಿದೆ. ಒಂದು ರೀತಿಯಲ್ಲಿ ಅದೇ ನಿರ್ಣಾಯಕ. ಮಂಗಳವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿರೀಕ್ಷೆಯಂತೆ ಜಯ ಸಾಧಿಸಿದ್ದರೆ ಮತ್ತೊಂದು ಪಂದ್ಯದ ಅಗತ್ಯವೇ ಇರುತ್ತಿರಲಿಲ್ಲ. ಈಗ ಮೂರನೇ ಕಾದಾಟಕ್ಕಾಗಿ ಕಾತರದಿಂದ ಕಾಯಬೇಕು.

ಮೊದಲ ಫೈನಲ್ನಲ್ಲಿ 15 ರನ್ಗಳ ಅಂತರದಿಂದ ಮಾಹೇಲ ಜಯವರ್ಧನೆ ಬಳಗವನ್ನು ಮಣಿಸಿದ್ದ ಆಸ್ಟ್ರೇಲಿಯಾಕ್ಕೆ ಈ ಪಂದ್ಯದಲ್ಲಿಯೂ ನಾಣ್ಯ ಚಿಮ್ಮುವ ಅದೃಷ್ಟದಾಟದಲ್ಲಿ ಯಶ ಸಿಕ್ಕಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡಕ್ಕೆ ಡೇವಿಡ್ ವಾರ್ನರ್ (100; 184 ನಿ., 140 ಎ., 4 ಬೌಂಡರಿ, 1 ಸಿಕ್ಸರ್) ಹಾಗೂ ಮೈಕಲ್ ಕ್ಲಾರ್ಕ್ (117; 143 ನಿ., 91 ಎ., 5 ಬೌಂಡರಿ, 4 ಸಿಕ್ಸರ್) ಅವರ ಶತಕದಾಟದಿಂದ ಬಲವೂ ಬಂತು.

ದಿಲ್ಶಾನ್ ಎಸೆತದಲ್ಲಿ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ ಬೌಲ್ಡ್ ಆದರೂ, ಆಸೀಸ್ ಕಳೆಗುಂದಲಿಲ್ಲ. ಶೇನ್ ವ್ಯಾಟ್ಸನ್, ಮೈಕಲ್ ಹಸ್ಸಿ ಮತ್ತು ಡೇವಿಡ್ ಹಸ್ಸಿ ಬೇಗ ನಿರ್ಗಮಿಸಿದ್ದೂ ಹೆಚ್ಚಿನ ಪರಿಣಾಮ ಮಾಡಲಿಲ್ಲ. ಆದರೆ ನಾಯಕ ಕ್ಲಾರ್ಕ್ `ರನ್ಔಟ್~ ಬಲೆಗೆ ಬಿದ್ದಾಗ ಮಾತ್ರ ಸ್ಥಳೀಯ ಪ್ರೇಕ್ಷಕರು ಬೇಸರದಿಂದ ಹೋ... ಎಂದರು. ಆದರೂ ನಾಯಕ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದ ಬೇಸರವಾಗಲಿಲ್ಲ. ಆಸ್ಟ್ರೇಲಿಯಾ ಬೌಲಿಂಗ್ ವಿಭಾಗದಲ್ಲಿಯೂ ಪರಿಣಾಮಕಾರಿ ಆಗಿದ್ದರೆ ಜಯ ಕೈಗೆಟುಕದ ಹಣ್ಣಾಗಿ ಉಳಿಯುತ್ತಿರಲಿಲ್ಲ.

ಗೆಲುವಿನ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡದ ಖಾತೆಗೆ ನಾಯಕ ಜಯವರ್ಧನೆ (80; 119 ನಿ., 76 ಎ., 8 ಬೌಂಡರಿ, 1 ಸಿಕ್ಸರ್) ಹಾಗೂ `ಪಂದ್ಯ ಶ್ರೇಷ್ಠ~ ಗೌರವ ಪಡೆದ ದಿಲ್ಶಾನ್ (106; 169 ನಿ., 119 ಎ., 10 ಬೌಂಡರಿ) ಅವರು ಮೊದಲ ವಿಕೆಟ್ನಲ್ಲಿಯೇ 179 ರನ್ ಗಿಟ್ಟಿಸಿಕೊಟ್ಟರು. ಆಗಲೇ ಗೆಲುವು ಸ್ಪಷ್ಟವಾಗಿತ್ತು. ನಂತರ ಸಂಗಕ್ಕಾರ (51; 77 ನಿ., 57 ಎ., 5 ಬೌಂಡರಿ) ಕೂಡ ಸಮಯೋಚಿತ ಆಟವಾಡಿ ತಮ್ಮ ತಂಡವನ್ನು ನಿರಾಯಾಸವಾಗಿ ಗೆಲುವಿನ ದಡ ಸೇರಿಸಿದರು.

ಸ್ಕೋರ್ ವಿವರ

ಆಸ್ಟ್ರೇಲಿಯಾ: 50 ಓವರುಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 271

ಮ್ಯಾಥ್ಯೂ ವೇಡ್ ಬಿ ತಿಲಕರತ್ನೆ ದಿಲ್ಶಾನ್ 14

ಡೇವಿಡ್ ವಾರ್ನರ್ ಸಿ ದಿಲ್ಶಾನ್ ಬಿ ಲಸಿತ್ ಮಾಲಿಂಗ 100

ಶೇನ್ ವ್ಯಾಟ್ಸನ್ ರನ್ಔಟ್ (ಫರ್ವೀಜ್ ಮಹಾರೂಫ್) 15

ಮೈಕಲ್ ಕ್ಲಾರ್ಕ್ ರನ್ಔಟ್ (ರಂಗನ ಹೆರಾತ್) 117

ಮೈಕಲ್ ಹಸ್ಸಿ ಬಿ ಲಸಿತ್ ಮಾಲಿಂಗ 06

ಡೇವಿಡ್ ಹಸ್ಸಿ ಬಿ ಲಸಿತ್ ಮಾಲಿಂಗ 07

ಡೇನಿಯಲ್ ಕ್ರಿಸ್ಟೀನ್ ಔಟಾಗದೆ 04

ಇತರೆ: (ಬೈ-2, ಲೆಗ್ಬೈ-3, ವೈಡ್-2, ನೋಬಾಲ್-1) 08
ವಿಕೆಟ್ ಪತನ: 1-22 (ಮ್ಯಾಥ್ಯೂ ವೇಡ್; 4.2), 2-56 (ಶೇನ್ ವ್ಯಾಟ್ಸನ್; 15.1), 3-240 (ಡೇವಿಡ್ ವಾರ್ನರ್; 45.5), 4-256 (ಮೈಕಲ್ ಹಸ್ಸಿ; 47.1), 5-266 (ಮೈಕಲ್ ಕ್ಲಾರ್ಕ್; 48.6), 6-271 (ಡೇವಿಡ್ ಹಸ್ಸಿ; 49.6).

ಬೌಲಿಂಗ್: ತಿಲಕರತ್ನೆ ದಿಲ್ಶಾನ್ 10-0-40-1, ನುವಾನ್ ಕುಲಶೇಖರ 10-0-57-0 (ವೈಡ್-1), ಲಸಿತ್ ಮಾಲಿಂಗ 10-1-40-3, ಫರ್ವೀಜ್ ಮಹಾರೂಫ್ 10-0-71-0 (ನೋಬಾಲ್-1), ರಂಗನ ಹೆರಾತ್ 10-0-58-0 (ವೈಡ್-1).

ಶ್ರೀಲಂಕಾ: 44.2 ಓವರುಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 274
ಜಯವರ್ಧನೆ ಎಲ್ಬಿಡಬ್ಲ್ಯು ಬಿ ಜೇಮ್ಸ ಪ್ಯಾಟಿನ್ಸನ್ 80
ತಿಲಕರತ್ನೆ ದಿಲ್ಶಾನ್ ಸಿ ಮೈಕಲ್ ಹಸ್ಸಿ ಬಿ ಬ್ರೆಟ್ ಲೀ 106
ಕುಮಾರ ಸಂಗಕ್ಕಾರ ಔಟಾಗದೆ 51
ದಿನೇಶ್ ಚಂಡಿಮಾಲ ಔಟಾಗದೆ 17

ಇತರೆ: (ಬೈ-4, ಲೆಗ್ಬೈ-4, ವೈಡ್-9, ನೋಬಾಲ್-3) 20

ವಿಕೆಟ್ ಪತನ:1-179 (ಮಾಹೇಲ ಜಯವರ್ಧನೆ; 27.1), 2-234 (ತಿಲಕರತ್ನೆ ದಿಲ್ಶಾನ್; 38.2).

ಬೌಲಿಂಗ್: ಬ್ರೆಟ್ ಲೀ 10-0-58-0 (ವೈಡ್-3), ಕ್ಲಿಂಟ್ ಮೆಕ್ಕೀ 9-0-51-0 (ನೋಬಾಲ್-1), ಜೇಮ್ಸ

ಪ್ಯಾಟಿನ್ಸನ್ 8-1-47-1 (ನೋಬಾಲ್-2, ವೈಡ್-3), ಕ್ಸೇವಿಯರ್ ಡೋಹರ್ಟಿ 9-0-55-0, ಡೇನಿಯಲ್

ಕ್ರಿಸ್ಟೀನ್ 4-0-29-0, ಡೇವಿಡ್ ಹಸ್ಸಿ 1-0-8-0 (ವೈಡ್-1), ಶೇನ್ ವ್ಯಾಟ್ಸನ್ 5.2-0-35-0

ಫಲಿತಾಂಶ: ಶ್ರೀಲಂಕಾಕ್ಕೆ 8 ವಿಕೆಟ್ಗಳ ವಿಜಯ; ಮೂರು ಪಂದ್ಯಗಳ ಫೈನಲ್ನಲ್ಲಿ 1-1ರಲ್ಲಿ ಸಮಬಲ.
ಪಂದ್ಯ ಶ್ರೇಷ್ಠ: ತಿಲಕರತ್ನೆ ದಿಲ್ಶಾನ್.

ಕೊನೆಯ ಫೈನಲ್ ಪಂದ್ಯ: ಅಡಿಲೇಡ್ ಓವಲ್ (ಮಾರ್ಚ್ 8, ಗುರುವಾರ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.