ಪ್ಯಾರಿಸ್ (ಎಎಫ್ಪಿ): ಅಮೆರಿಕದ ಸೆರೆನಾ ವಿಲಿಯಮ್ಸ ಮತ್ತು ಇಟಲಿಯ ಸಾರಾ ಎರಾನಿ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ರೋಲಂಡ್ ಗ್ಯಾರೋಸ್ನ ಸುಜಾನ್ ಲೆಂಗ್ಲೆನ್ ಕೋರ್ಟ್ನಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಸೆರೆನಾ 6-1, 3-6, 6-3 ರಲ್ಲಿ ರಷ್ಯಾದ ಸೆಟ್ಲಾನಾ ಕುಜ್ನೆತ್ಸೋವಾ ವಿರುದ್ಧ ಜಯ ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ ಎರಾನಿ 6-4, 7-6 ರಲ್ಲಿ ಪೋಲೆಂಡ್ನ ಅಗ್ನೀಸ್ಕಾ ರಡ್ವಾನ್ಸ್ಕಾ ವಿರುದ್ಧ ಗೆದ್ದರು.

ಹನ್ನೊಂದು ವರ್ಷಗಳ ಬಿಡುವಿನ ಬಳಿಕ ಇಲ್ಲಿ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿರುವ ಸೆರೆನಾ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದರು. ಮೊದಲ ಸೆಟ್ಅನ್ನು ಸುಲಭದಲ್ಲಿ ಗೆದ್ದುಕೊಂಡ ಅವರು ಎರಡನೇ ಸೆಟ್ಅನ್ನು ಎದುರಾಳಿಗೆ ಒಪ್ಪಿಸಿದರು. ಮಾತ್ರವಲ್ಲ, ನಿರ್ಣಾಯಕ ಸೆಟ್ನಲ್ಲಿ ಒಂದು ಹಂತದಲ್ಲಿ 0-2 ರಲ್ಲಿ ಹಿನ್ನಡೆಯಲ್ಲಿದ್ದರು. ಆ ಬಳಿಕ ಅದ್ಭುತ ರೀತಿಯಲ್ಲಿ ಮರುಹೋರಾಟ ನಡೆಸಿ ಸೆಟ್ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಫೆಡರರ್ಗೆ ಆಘಾತ: ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಸೋತು ಹೊರಬಿದ್ದರು. ಅವರಿಗೆ ಆಘಾತ ನೀಡ್ದ್ದಿದು ಫ್ರಾನ್ಸ್ನ ಜೋ ವಿಲ್ಫ್ರೆಡ್ ಸೋಂಗಾ. ಆರನೇ ಶ್ರೇಯಾಂಕದ ಸೋಂಗಾ 7-5, 6-3, 6-3 ರಲ್ಲಿ ಸ್ವಿಸ್ ಆಟಗಾರನನ್ನು ಮಣಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟರು

ಕ್ವಾರ್ಟರ್ ಫೈನಲ್ಗೆ ಶರ್ಪೋವಾ: ಎರಡನೇ ಶ್ರೇಯಾಂಕದ ಆಟಗಾರ್ತಿ ರಷ್ಯಾದ ಮರಿಯಾ ಶರ್ಪೋವಾ ಎಂಟರಘಟ್ಟ ಪ್ರವೇಶಿಸಿದರು. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಶರ್ಪೋವಾ 6-4, 6-3 ರಲ್ಲಿ ಅಮೆರಿಕದ ಸ್ಲೊವಾನೆ ಸ್ಟೀಫನ್ಸ್ ವಿರುದ್ಧ ಗೆಲುವು ಪಡೆದರು.

ಸರ್ಬಿಯದ ಯೆಲೆನಾ ಜಾಂಕೋವಿಚ್ 6-0, 6-2 ರಲ್ಲಿ ಅಮೆರಿಕದ ಜೇಮಿ ಹ್ಯಾಂಪ್ಟನ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು.

ಸಾನಿಯಾ- ಬೆಥನಿ ಸವಾಲು ಅಂತ್ಯ
ಸಾನಿಯಾ ಮಿರ್ಜಾ ಮತ್ತು ಬೆಥನಿ ಮಟೆಕ್ ಸ್ಯಾಂಡ್ಸ್ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಧದಲ್ಲೇ ಹಿಂದೆ ಸರಿಯಿತು.

ರಷ್ಯಾದ ಅನಸ್ತೇಸಿಯ ಪವ್ಲಿಚೆಂಕೋವಾ ಮತ್ತು ಲೂಸಿ ಸಫರೋವಾ ವಿರುದ್ಧದ ಪಂದ್ಯದ ಮೊದಲ ಸೆಟ್ನಲ್ಲಿ ಸಾನಿಯಾ- ಬೆಥನಿ 6-7 ರಲ್ಲಿ ಸೋಲು ಅನುಭವಿಸಿದರು. ಎರಡನೇ ಸೆಟ್ನಲ್ಲಿ ಮರುಹೋರಾಟ ತೋರಿ 5-3 ರಲ್ಲಿ ಮುನ್ನಡೆ ಪಡೆದಿದ್ದರು. ಆದರೆ ಈ ವೇಳೆ ಬೆಥನಿ ತೊಡೆಯ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲಿದರಲ್ಲದೆ, ಪಂದ್ಯವನ್ನು ತ್ಯಜಿಸುವ ನಿರ್ಧಾರ ಕೈಗೊಂಡರು.

ಸೋಮವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ- ಅಮೆರಿಕ ಜೋಡಿ 1-6, 6-3, 6-0 ರಲ್ಲಿ ಅಮೆರಿಕದ ಲಾರೆನ್ ಡೇವಿಸ್ ಮತ್ತು ಮೇಗನ್ ಮೌಲ್ಟನ್ ಲೆವಿ ವಿರುದ್ಧ ಜಯ ಪಡೆದಿತ್ತು.

ಲಿಯಾಂಡರ್ ಪೇಸ್ ಮತ್ತು ಯೆಲೆನಾ ಜಾಂಕೋವಿಚ್ ಜೋಡಿ 5-7, 7-6, 2-10 ರಲ್ಲಿ ಅಮೆರಿಕದ ಲಿಜೆಲ್ ಹುಬೆರ್ ಹಾಗೂ ಬ್ರೆಜಿಲ್ನ ಮಾರ್ಸೆಲೊ ಮೆಲೊ ಎದುರು ಪರಾಭವಗೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.