ಓರ್ಡೊಸ್, ಚೀನಾ (ಪಿಟಿಐ): ಭಾರತದ ಮಹಿಳೆಯರ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದರಿಂದಾಗಿ ಪ್ರಶಸ್ತಿಯ ಕನಸು ಕಾಣುವುದಕ್ಕೂ ಅವಕಾಶ ಇಲ್ಲದಂತಾಗಿದೆ. ಶನಿವಾರ ಮೂರನೇ ಸ್ಥಾನಕ್ಕಾಗಿ ಜಪಾನ್ ವಿರುದ್ಧ ಆಡಬೇಕಾಗಿದೆ.

ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್ ಎದುರು ಪರಾಭವಗೊಂಡಿದ್ದ ಭಾರತದ ವನಿತೆಯರು ಗುರುವಾರದ ಲೀಗ್ ಪಂದ್ಯದಲ್ಲಿ 0-4 ಗೋಲುಗಳ ಅಂತರದಿಂದ ಆತಿಥೇಯ ಚೀನಾಕ್ಕೆ ಶರಣಾದರು.

ವಿಜಯಿ ತಂಡದ ಯುಡಿಯಾವೊ ಜಾವೊ (6 ಮತ್ತು 66ನೇ ನಿಮಿಷ) ಹಾಗೂ ಯುಬೊ ಮಾ (23 ಮತ್ತು 65ನೇ ನಿ.) ಅವರು ಗೋಲು ಗಳಿಸಿದರು. ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ನಿರಾಸೆಯ ಪ್ರದರ್ಶನ ನೀಡಿದ ಭಾರತ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.