ಶುಕ್ರವಾರ, ಫೆಬ್ರವರಿ 21, 2020
23 °C

ಪೆನ್‌ಡ್ರೈವ್‌ ಪ್ರದರ್ಶನ: ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್‌.ಪೇಟೆ: ‘ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಬಿಜೆಪಿ ಸೇರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ₹40 ಕೋಟಿ ಸ್ವೀಕರಿಸಿದ್ದಾನೆ’ ಎಂದು ಆರೋಪ ಮಾಡಿದ ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ, ಆ ಕುರಿತ ಆಡಿಯೊ, ವಿಡಿಯೊ ಹಾಗೂ ಇತರ ದಾಖಲಾತಿಗಳಿವೆ ಎನ್ನಲಾದ ಪೆನ್‌ಡ್ರೈವ್‌ ಪ್ರದರ್ಶನ ಮಾಡಿದರು.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮುಖ್ಯಮಂತ್ರಿಗಳು ಅನರ್ಹ ಶಾಸಕರ ಜೊತೆ ನಡೆಸಿರುವ ಮಾತುಕತೆ, ಒಪ್ಪಂದದ ವಿವರ ಪೆನ್‌ಡ್ರೈವ್‌ನಲ್ಲಿದೆ. ಈ ಕುರಿತು ವಿಶೇಷ ತನಿಖೆ ನಡೆಸಬೇಕು. ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು. ತನಿಖೆ ಆರಂಭಗೊಂಡರೆ ಎಲ್ಲಾ ವಿವರ ನೀಡಲಾಗುವುದು. ಈ ಸಂದರ್ಭದಲ್ಲಿ ಆಡಿಯೊ, ವಿಡಿಯೊ ಬಿಡುಗಡೆ ಮಾಡುವುದಿಲ್ಲ’ ಎಂದರು.

ಆಣೆ, ಪ್ರಮಾಣ ಮಾಡಲಿ: ‘ರಾಜೀನಾಮೆ ನೀಡುವುದಕ್ಕಾಗಿ ಮೊದಲು ₹5 ಕೋಟಿಗೆ ಒಪ್ಪಂದವಾಗಿತ್ತು. ನಂತರ ನಾರಾಯಣಗೌಡ ಅದು ಸಾಕಾಗುವುದಿಲ್ಲ ಎಂದು ಬೇಡಿಕೆ ಇಟ್ಟ. ಮುಖ್ಯಮಂತ್ರಿಗಳು ₹40 ಕೋಟಿ ನೀಡಲು ಒಪ್ಪಿದರು. ಈ ಬಗ್ಗೆ ವಿಶೇಷ ತನಿಖೆ ನಡೆಸಲು ಮುಖ್ಯಮಂತ್ರಿಗಳೇ ಆದೇಶ ನೀಡಬೇಕು. ಒಪ್ಪಂದ ಮಾಡಿಕೊಂಡಿಲ್ಲ ಎನ್ನುವುದಾದರೆ ಯಡಿಯೂರಪ್ಪ, ನಾರಾಯಣಗೌಡ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಮನೆ ದೇವರ ಎದುರು ಆಣೆ, ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು