ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವಭಾರತ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ’

Last Updated 25 ಮಾರ್ಚ್ 2019, 14:50 IST
ಅಕ್ಷರ ಗಾತ್ರ

ಹಾನಗಲ್: ‘ನರೇಂದ್ರ ಮೋದಿ ನವ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ, ಆದರೆ ಮೋದಿ ಸೋಲಿಸುವುದನ್ನು ಮಹಾಘಟಬಂಧನ ಅಜೆಂಡಾ ಮಾಡಿಕೊಂಡಿದೆ’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಅಲೆ ದೇಶದಲ್ಲಿದೆ.ಬೇರೆ ಪಕ್ಷಗಳ ಮತಗಳು ಈ ಬಾರಿ ಬಿಜೆಪಿ ಬೆನ್ನಿಗೆ ನಿಲ್ಲಲಿವೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗಾಗಿ ಸದೃಢ ನಾಯಕತ್ವವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಬೇನಾಮಿ ಆಕ್ಟ್ ಅಡಿಯಲ್ಲಿ ಈಗಾಗಲೇ ಪ್ರಭಾವಿ ರಾಜಕೀಯ ನಾಯಕರ ಮೇಲೆ ಕ್ರಮಕ್ಕೆ ಬೆದರಿ ಘಟಬಂಧನ ನೆಪದಲ್ಲಿ ಜೈಲು ಪಾಲಾಗುವ ಭೀತಿಯನ್ನು ತಪ್ಪಿಸಿಕೊಳ್ಳುವ ತಂತ್ರ ನಡೆದಿದೆ’ ಎಂದರು.

‘ಹಾವೇರಿ ಜಿಲ್ಲೆ ಫಸಲ್‌ ಭೀಮಾ ಯೋಜನೆಯ ಹೆಚ್ಚು ಲಾಭ ಪಡೆದಿದೆ. ಗದಗ ಮತ್ತು ರಾಣೆಬೆನ್ನೂರಿನಲ್ಲಿ ಅಮೃತ ಸಿಟಿಗೆ ಚಾಲನೆ ನೀಡಲಾಗಿದ್ದು, ಹಾವೇರಿ ಮತಕ್ಷೇತ್ರದಲ್ಲಿ 1.80 ಲಕ್ಷ ಉಜ್ವಲ್‌ಸಂಪರ್ಕ ಒದಗಿಸಲಾಗಿದೆ. ಕ್ಷೇತ್ರದಲ್ಲಿ 2 ಹೊಸ ರೈಲು ಮಾರ್ಗ, 815 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಂತದಲ್ಲಿದೆ’ ಎಂದರು.

ಶಿಗ್ಗಾವ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ದೇಶದ ಚೌಕಿದಾರ್ ಗೆಲ್ಲಬೇಕು, ಬಿಜೆಪಿಗೆ ಮತ ನೀಡಬೇಕು. ಕ್ಷೇತ್ರದ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಸಮರ್ಥವಾಗಿ ಮಂಡಿಸುವ ಶಿವಕುಮಾರ ಉದಾಸಿ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಸಿ.ಎಂ.ಉದಾಸಿ, ಮುಖಂಡರಾದ ಪದ್ಮನಾಭ ಕುಂದಾಪೂರ, ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಮಾಜಿ ಅಧ್ಯಕ್ಷ ಭೋಜರಾಜಕರೂದಿ, ಜಿಲ್ಲಾ ಪಂಚಾಯ್ತಿ ಸದಸ್ಯ ಮಾಲತೇಶ ಸೊಪ್ಪಿನ, ಮುಖಂಡರಾದ ಬಿ.ಎಸ್.ಅಕ್ಕಿವಳ್ಳಿ, ಶಿವಲಿಂಗಪ್ಪ ತಲ್ಲೂರ, ಮಲ್ಲನಗೌಡ ವೀರನಗೌಡ್ರ, ಬಸವರಾಜ ಬೂದಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT