ಯುಗಾದಿ: ಖರೀದಿ ಭರಾಟೆ ಜೋರು

ಬುಧವಾರ, ಏಪ್ರಿಲ್ 24, 2019
29 °C

ಯುಗಾದಿ: ಖರೀದಿ ಭರಾಟೆ ಜೋರು

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಯುಗಾದಿ ಆಚರಣೆಗೆ ಜನರು ಸಜ್ಜಾಗಿದ್ದು, ಅಗತ್ಯ ವಸ್ತುಗಳ ಖರೀದಿ ಭರಾಟೆ ಶುಕ್ರವಾರ ಜೋರಾಗಿತ್ತು.

ನಗರದ ಹನುಮಂತಪ್ಪ ವೃತ್ತ, ಆಜಾದ್ ಪಾರ್ಕ್‌ ವೃತ್ತ, ತೊಗರಿಹಂಕಲ್ ವೃತ್ತ, ಎಂ.ಜಿ.ರಸ್ತೆ, ಮಾರ್ಕೆಟ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರ ಹೆಚ್ಚಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿ ಬಿದ್ದಿದ್ದರು. ಬೇವಿನ ಸೊಪ್ಪು, ಧವನಕ್ಕೆ ಬೇಡಿಕೆ ಇತ್ತು.

ಸೇಬು ಕೆ.ಜಿಗೆ ₹150, ದ್ರಾಕ್ಷಿ ₹80, ಸಪೋಟ ₹60, ದಾಳಿಂಬೆ ₹120, ಕಿತ್ತಳೆ ₹60ರಿಂದ 80, ಪುಟ್ಟಬಾಳೆಹಣ್ಣು ₹ 60,  ಚೆಂಡು ಹೂ ಒಂದು ಮಾರಿಗೆ ₹50, ಸೇವಂತಿಗೆ ₹80, ಮಲ್ಲಿಗೆ ₹60, ಕನಕಾಂಬರ ₹60, ಕಾಕಡ ₹80ಕ್ಕೆ , ಮಾವಿನ ಸೊಪ್ಪು, ಧವನ, ಬೇವಿನ ಸೊಪ್ಪು ತಲಾ ಒಂದು ಕಟ್ಟಿಗೆ ₹10ಕ್ಕೆ ಮಾರಾಟವಾದವು.

ತರಕಾರಿಗಳ ಬೆಲೆಯೂ ತುಸು ಏರಿಕೆ ಖಂಡಿತ್ತು. ಆಲೂಗಡ್ಡೆ ಕೆ.ಜಿ.ಗೆ ₹60, ಕ್ಯಾರೆಟ್ ₹60, ಬದನೆಕಾಯಿ ₹80, ಗೆಡ್ಡೆಕೋಸು ₹60, ಬೀನ್ಸ್ ₹80, ಜವಳಿಕಾಯಿ ₹80, ಬಠಾಣಿ ₹80, ನುಗ್ಗೆಕಾಯಿಗೆ ₹60 ಧಾರಣೆ ಇತ್ತು.

ಎಂ.ಜಿ.ರಸ್ತೆ, ಐ.ಜಿ.ರಸ್ತೆಗಳಲ್ಲಿನ ಬಟ್ಟೆ ಅಂಗಡಿಗಳಲ್ಲಿ ಜನರು ಕುಟುಂಬ ಸಮೇತರಾಗಿ ಹೊಸಬಟ್ಟೆ ಖರೀದಿಸುತ್ತಿದ್ದರು. ಹಬ್ಬದ ನಿಮಿತ್ತ ನಗರದಲ್ಲಿ ಜನಸಂದಣಿ ಹೆಚ್ಚಾಗಿತ್ತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !