ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಗಳ ಜತೆಯಲ್ಲಿ ಬಣ್ಣಗಳ ನೃತ್ಯ

Last Updated 10 ಜೂನ್ 2019, 19:45 IST
ಅಕ್ಷರ ಗಾತ್ರ

ಕಾಲ ಬದಲಾದಂತೆಕಲೆ ಕೂಡ ವಿಭಿನ್ನ ಆಯಾಮ ಪಡೆದುಕೊಳ್ಳುತ್ತವೆ ಎಂಬ ಮಾತನ್ನು ನೆನಪಿಸಿದ್ದುಯುಬಿ ಸಿಟಿಯಲ್ಲಿ ಆರಂಭವಾಗಿರುವ ಚಿತ್ರ ಕಲಾವಿದೆ ತರಬ್ ಖಾನ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ. ಕಲಾವಿದೆಯ ಮನಸ್ಸಿನ ತವಕ–ತಲ್ಲಣ, ಕನಸು ಮತ್ತು ಕಲ್ಪನೆಗಳು ಕ್ಯಾನ್ವಾಸ್‌ ಮೇಲೆ ಬಣ್ಣ ಪಡೆದುಕೊಂಡಿವೆ. ಗಾಢ ಮತ್ತು ತಿಳಿ ಬಣ್ಣಗಳ ಸಂಯೋಜನೆಯಿಂದ ಜೀವ ಪಡೆದುಕೊಂಡಿವೆ. ಒಂದು ತಿಂಗಳು ಈ ಚಿತ್ರಗಳನ್ನು ಆಸ್ವಾದಿಸಬಹುದು.ಉತ್ತರಪ್ರದೇಶದ ಷಹಜಾನಪುರದ ತರಬ್ ಖಾನ್ ಸದ್ಯ ಒಡಿಶಾದಲ್ಲಿ ನೆಲೆ ನಿಂತಿದ್ದಾರೆ. ಪ್ರದರ್ಶನಗಳಿಗಾಗಿ ರಾಜ್ಯದಿಂದ ರಾಜ್ಯಕ್ಕೆ ಅಲೆಯುವ ಖಾನ್ ಅವರದ್ದು ಒಂದು ರೀತಿ ಹೊಸತನಕ್ಕಾಗಿ ಹಾತೊರೆಯುವ ಅಲೆಮಾರಿ ಬದುಕು. ‘ಮೆಟ್ರೊ’ ಜತೆ ಅವರು ನಡೆಸಿದ ಮಾತುಕತೆ ಇಲ್ಲಿದೆ.

ನೀವು ಆಯ್ಕೆ ಮಾಡಿಕೊಂಡ ಕಥಾವಸ್ತು ಇಲ್ಲಿ ಹೇಗೆ ಬಿಂಬಿತವಾಗಿದೆ?

‘ಡಾನ್ಸಿಂಗ್‌ ವಿತ್‌ ಕ್ಲೌಡ್ಸ್‌’ ಎಂಬ ವಸ್ತುವಿಷಯದ ಬಗ್ಗೆ ನಾನು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದೇನೆ.ಆಳವಾದ ಅಧ್ಯಯನದ ಫಲವೇ ಈ ಚಿತ್ರಗಳು. ನಾನು ಬರೆದ ಪುಸ್ತಕದ ವಿಷಯ ಹಾಗೂ ಬಿಡಿಸುವ ಕಲೆಯ ವಿಷಯ ಒಂದೇ ಆಗಿದ್ದರಿಂದ ಕೆಲಸ ಸುಲಭವಾಯಿತು. ರೂಪಕಗಳನ್ನು ಬಳಸಿದ್ದರಿಂದ ಚಿತ್ರಗಳು ಹೆಚ್ಚು ಪರಿಣಾಮಕಾರಿಯಾಗಿ ಮೂಡಿ ಬಂದಿವೆ.

ಕಲೆಗಳಲ್ಲಿ ಉಪಯೋಗಿಸಿದ ರೂಪಕಗಳ ಬಗ್ಗೆ ವಿವರಿಸಿ.

ಕುದುರೆ ನನ್ನ ಚಿತ್ರಗಳ ಬಹು ಮುಖ್ಯ ರೂಪಕ. ಕೊಂಬಿನ ಕುದುರೆಯನ್ನು ಒಂದು ಪಾತ್ರಧಾರಿಯಾಗಿ ಬಳಸಿಕೊಂಡಿದ್ದೇನೆ. ಒಂದು ಕೊಂಬಿನ ಕುದುರೆಯ ಬಗ್ಗೆ ನಾವೆಲ್ಲಾ ಕೇಳಿದ್ದೇವೆ ಮತ್ತುಓದ್ದಿದ್ದೇವೆ.ನನ್ನ ಕಲೆಯಲ್ಲಿ ಅವುಗಳಿಗೆ ಒಂದು ಜೀವ ನೀಡುವ ಪ್ರಯತ್ನ ಮಾಡಿದ್ದೇನೆ. ಯೂನಿಕಾರ್ನ್‌ ಅಥವಾ ಕೊಂಬಿನ ಕುದುರೆ ಪ್ರಬಲತೆಯ ಸಂಕೇತವಾಗಿರುವದರಿಂದ ನನ್ನ ಚಿತ್ರಕಲೆಗೆ ಅದನ್ನು ಕಥಾವಸ್ತುವನ್ನಾಗಿ ಬಳಸಿಕೊಂಡಿದ್ದೇನೆ.

ನಿಮ್ಮ ಚಿತ್ರಕಲೆಗಳು ಯಾವ ಯಾವ ವಿಷಯದ ಮೇಲೆ ಬಿಂಬಿತವಾಗಿವೆ.

ನನ್ನ ಹೆಚ್ಚಿನ ಚಿತ್ರಕಲೆಗಳು ಕಾಲ್ಪನಿಕ ಜಗತ್ತನ್ನು ಬಿಂಬಿಸುತ್ತವೆ. ಕನಸಿನ ವ್ಯಾಖ್ಯಾನ ಎತ್ತಿ ಹಿಡಿಯುವ ಚಿತ್ರಗಳು ಇಲ್ಲಿವೆ. ಸಾಮಾನ್ಯವಾಗಿ ಕನಸುಗಳ ಅನುಭವ ಹೊಸದೇನಲ್ಲ ಆದರೆ ಅದೇ ಕನಸುಗಳನ್ನು ವಿಭಿನ್ನ ರೀತಿಯಲ್ಲಿ ಹಲವಾರು ಕಾಲ್ಪನಿಕ ಅಂಶಗಳಿಂದ ತೋರಿಸುವ ಪರಿ ನೋಡುಗರನ್ನು ಸೆಳೆಯುತ್ತವೆ. ನಾನು ಕಂಡ ಕಾಲ್ಪನಿಕ ಜಗತ್ತಿಗೆ ಬಣ್ಣ ತುಂಬಿ ಕ್ಯಾನ್ವಾಸ್‌ ಮೇಲೆ ಜೀವ ನೀಡಿದ್ದೇನೆ.

ನಿಮ್ಮ ಕಾಲ್ಪನಿಕ ಲೋಕದ ರಹಸ್ಯದ ಏನು ಹೇಳುತ್ತೀರಿ?

ನಾವು ಕ್ರಿಯಾತ್ಮಕ ಜಗತ್ತಿನ ಭಾಗ.ಯಾವುದೋ ಒಂದು ಅಭೂತಪೂರ್ವ ದೃಶೃ ನಮ್ಮನ್ನು ಸೆಳೆಯುತ್ತದೆ. ಅದು ನಮಗೆ ಸಂಬಂಧವಿಲ್ಲವಾದರು ಕೂಡಾ ನಮ್ಮ ತಲೆಯಲ್ಲಿ ಕೊರೆಯುತ್ತಿರುತ್ತದೆ.ಕನಸುಗಳನ್ನು ಆಳವಾಗಿ ಅನುಭವಿಸುವುದರಿಂದ ಚಿತ್ರಕಲೆಯಷ್ಟೇ ಅಲ್ಲ ಎಲ್ಲ ರೀತಿಯ ಕಲೆಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸಲು ಸಹಾಯಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT