ಹೊತ್ತಿ ಉರಿದ ಬಿಎಂಟಿಸಿ ಬಸ್‌

ಬುಧವಾರ, ಜೂಲೈ 17, 2019
29 °C

ಹೊತ್ತಿ ಉರಿದ ಬಿಎಂಟಿಸಿ ಬಸ್‌

Published:
Updated:
Prajavani

ವೈಟ್‌ಪೀಲ್ಡ್: ಮಾರತ್ತಹಳ್ಳಿ ರಿಂಗ್‌ ರಸ್ತೆಯ ದೊಡ್ಡನೆಕುಂದಿ ಬಳಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಯಿತು.

ಬನಶಂಕರಿಯಿಂದ ಹೆಬ್ಬಾಳ ಕಡೆಗೆ ಚಲಿಸುತ್ತಿದ್ದ 500–A ಮಾರ್ಗ ಸಂಖ್ಯೆಯ ಬಿಎಂಟಿಸಿ ಬಸ್, ದೊಡ್ಡನೆಕ್ಕುಂದಿ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗಿದ ಕೆಲವೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡಿತು.

ಇದನ್ನು ಗಮನಿಸಿದ ಚಾಲಕ ಕೂಡಲೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದರು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ. ರಸ್ತೆ ಬದಿಯಲ್ಲೇ ಇದ್ದ ಖಾಸಗಿ ಕಂಪನಿಯೊಂದರ ಸಿಬ್ಬಂದಿ ಅಗ್ನಿ ನಂದಿಸುವಸಲಕರಣೆಗಳನ್ನು ತಂದು ಬೆಂಕಿ ಹರಡುವುದನ್ನು ತಡೆಯುವ ಪ್ರಯತ್ನ ನಡೆಸಿದರು. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ಬಸ್ ಬಹುತೇಕ ಸುಟ್ಟು ಹೋಗಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !