ಮಂಗಳವಾರ, ನವೆಂಬರ್ 19, 2019
27 °C

‘ಅನಂತಕುಮಾರ್‌ ಪ್ರತಿಷ್ಠಾನ’ ಉದ್ಘಾಟನೆ ನಾಳೆ

Published:
Updated:

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ಅನಂತ ಕುಮಾರ್‌ ಜನ್ಮದಿನಾಚರಣೆ ಅಂಗವಾಗಿ ಪ್ರೊ.ಪಿ.ವಿ.ಕೃಷ್ಣಭಟ್ ನೇತೃತ್ವದಲ್ಲಿ ಸೆಪ್ಟೆಂಬರ್‌ 22ರಂದು ಮಧ್ಯಾಹ್ನ 3 ಗಂಟೆಗೆ ‘ಅನಂತಕುಮಾರ್ ಪ್ರತಿಷ್ಠಾನ’ದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಭಾಗಿಯಾಗಲಿದ್ದಾರೆ. ಇದೇ ವೇಳೆ ಬಡ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಮಾಡಲಾಗುವುದು.

ಸ್ಥಳ–ಮಂಗಳ ಸಭಾಮಂಟಪ, ಎನ್‌ಎಂಕೆಆರ್‌ವಿ ಕಾಲೇಜು ಆವರಣ, ಜಯನಗರ.

ಪ್ರತಿಕ್ರಿಯಿಸಿ (+)