ಸರ್ಕಾರಿ ಬಾಲಮಂದಿರ; ಬಾಲಕರು ಪರಾರಿ

7

ಸರ್ಕಾರಿ ಬಾಲಮಂದಿರ; ಬಾಲಕರು ಪರಾರಿ

Published:
Updated:

ಬೆಂಗಳೂರು: ಇತ್ತೀಚೆಗೆ ಊಟ ಮಾಡಿ ಅಸ್ವಸ್ಥಗೊಂಡಿದ್ದ ನಗರದ ಸರ್ಕಾರಿ ಬಾಲಮಂದಿರದ ಬಾಲಕರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲೇ, ಇಬ್ಬರು ಪರಾರಿಯಾಗಿದ್ದಾರೆ.

ಆ ಸಂಬಂಧ ಬಾಲಮಂದಿರದ ಮೇಲ್ವಿಚಾರಕಿ ಸುಧಾರಾಣಿ ನಾಯಕ್, ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ.

‘ಡಿ.30ರಂದು ರಾತ್ರಿ 8.45ರ ಸುಮಾರಿಗೆ 105 ಮಕ್ಕಳನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಅದೇ ವೇಳೆ ನೂಕುನುಗ್ಗಲು ಉಂಟಾಗಿ ಇಬ್ಬರು ಬಾಲಕರು ಪರಾರಿಯಾಗಿದ್ದಾರೆ’ ಎಂದು ಸುಧಾರಾಣಿ, ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !