ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಾದವೇ ಬಿಜೆಪಿ ಉಸಿರು

ನಗರ ದಕ್ಷಿಣ ಘಟಕದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದ ಕಾಮತ್‌
Last Updated 8 ಫೆಬ್ರುವರಿ 2020, 14:12 IST
ಅಕ್ಷರ ಗಾತ್ರ

ಮಂಗಳೂರು: ದೀನದಯಾಳ್ ಉಪಾಧ್ಯಾಯ ಹಾಗೂ ಶ್ಯಾಮಪ್ರಸಾದ್ ಮುಖರ್ಜಿಯವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿಬಂದ ಪಕ್ಷವು, ಇಂದು ಜಗತ್ತಿನ ಅತೀ ದೊಡ್ಡ ರಾಜಕೀಯ ಸಂಘಟನೆಯಾಗಿರುವುದು ನಮ್ಮ ಹೆಮ್ಮೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್‌ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಜೆಪಿ ನಗರ ದಕ್ಷಿಣ ಘಟಕದ ನೂತನ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಬಿಜೆಪಿ ಭಾರತದ ಮೂಲೆ ಮೂಲೆಗಳಲ್ಲಿ ತನ್ನ ವಿಚಾರಧಾರೆಯ ಮೂಲಕ ಬಲಗೊಂಡಿದೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರಾಷ್ಟ್ರೀಯವಾದವನ್ನು ಉಸಿರಾಡುವ ರಾಷ್ಟ್ರೀಯವಾದಿ ಪಕ್ಷವಾಗಿ ಜನಮನ್ನಣೆ ಗಳಿಸಿದೆ ಎಂದರು.

‘ಬೂತ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಬಿಜೆಪಿಗೆ ಬಲ ತುಂಬಿದವರು ಕಾರ್ಯಕರ್ತರು. ನನ್ನ ಅವಧಿಯಲ್ಲಿ ನನ್ನೊಂದಿಗೆ ಹೆಗಲುಕೊಟ್ಟು ನಿಂತ ಪ್ರತಿಯೊಬ್ಬ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನೂತನ ಅಧ್ಯಕ್ಷ ವಿಜಯ್ ಕುಮಾರ್ ಅವರೊಂದಿಗೆ ನಾವೆಲ್ಲರೂ ಜತೆಯಾಗಿ ನಿಂತು ಪಕ್ಷವನ್ನು ಬಲಪಡಿಸೋಣ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ಮಂಗಳೂರು ನಗರ ದಕ್ಷಿಣ ಮಂಡಲವು ಪಕ್ಷ ಸಂಘಟನೆಯಲ್ಲಿ ಅಗ್ರಶ್ರೇಣಿಗೇರಲು ಸಂಘಟನಾ ತಂಡದ ಶ್ರಮ ಮಹತ್ವದ್ದಾಗಿದೆ. ಮಂಡಲ ಅಧ್ಯಕ್ಷರಾಗಿದ್ದ ವೇದವ್ಯಾಸ ಕಾಮತ್ ಅವರ ಸಂಘಟನಾ ನೈಪುಣ್ಯ ಹಾಗೂ ಕಾರ್ಯದರ್ಶಿಗಳ ಸಂಘಟನಾ ಸಾಮರ್ಥ್ಯವು ಮುಂದಿನ ಮಂಡಲ ಸಮಿತಿಗೆ ಆದರ್ಶಪ್ರಾಯವಾಗಲಿ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಯುವ ನಾಯಕತ್ವದಲ್ಲಿ ಬೆಳೆಯುವ ಅತ್ಯಂತ ಬಲಾಢ್ಯ ರಾಜಕೀಯ ಪಕ್ಷವಾಗಿದೆ. ಜನ ಸಂಘದಿಂದ ಇಂದಿನವರೆಗೆ ಪಕ್ಷದ ಚಟುವಟಿಕೆಗಳು ಬಹಳಷ್ಟು ವಿಸ್ತಾರಗೊಂಡಿವೆ. ಮುಂದೆಯೂ ಪಕ್ಷ ಸಂಘಟನೆಗೆ ಶ್ರಮಿಸೋಣ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ಪ್ರಭಾ ಮಾಲಿನಿ, ಖಜಾಂಚಿಸಂಜಯ್ ಪ್ರಭು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಕಂಡೆಟ್ಟು, ಭಾಸ್ಕರ್‌ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ರವೀಂದ್ರ ಕುಮಾರ್, ನಿತಿನ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT