ಸೋಮವಾರ, ಸೆಪ್ಟೆಂಬರ್ 28, 2020
28 °C

ಕುಖ್ಯಾತ ಸರಗಳ್ಳನ ಸಹಚರರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕಾಲಿಗೆ ಗುಂಡು ಹಾರಿಸಿ ಕುಖ್ಯಾತ ಸರಗಳ್ಳ ಅಚ್ಯುತ್‌ ಕುಮಾರ್ ಗಣಿ ಅಲಿಯಾಸ್ ವಿಶ್ವನಾಥ್‌ನನ್ನು (31) ಆಗಸ್ಟ್‌ನಲ್ಲಿ ಸೆರೆ ಹಿಡಿದಿದ್ದ ಪಶ್ಚಿಮ ವಿಭಾಗದ ಪೊಲೀಸರು, ಆತನ ಮೂವರು ಸಹಚರರನ್ನು ಬುಧವಾರ ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ದೋಣಿ ಗ್ರಾಮದ ಶಿವರಾಜ್ ರುದ್ರಯ್ಯ ಹಿರೇಮಠ (29), ಗದಗಿನ ಮಧುರೈ ಓಣಿಯ ಸುನೀಲ್ (24) ಹಾಗೂ ಅನಿಲ್ (22) ಬಂಧಿತರು. ಅವರಿಂದ ₹29.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಪ್ರಮುಖ ಆರೋಪಿ ಅಚ್ಯುತ್‌ ಕುಮಾರ್, ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡದವ. ಆತನ ವಿರುದ್ಧ ರಾಜ್ಯದಾದ್ಯಂತ 195 ಪ್ರಕರಣಗಳು ದಾಖಲಾಗಿದ್ದವು. ಆತನನ್ನು ಬಂಧಿಸಿ ₹1.06 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 5 ಬೈಕ್‌ಗಳನ್ನು ಜಪ್ತಿ ಮಾಡಲಾಗಿತ್ತು. ಆ ಮಾಹಿತಿ ತಿಳಿದ ಸಹಚರರು ತಲೆಮರೆಸಿಕೊಂಡಿದ್ದರು.

ವಿಶೇಷ ತಂಡದ ಪೊಲೀಸರು, ಸಹಚರರನ್ನು ಈಗಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ತಿಳಿಸಿದರು.ಬಂಧಿಸಲಾಗಿರುವ ಮೂವರು ಆರೋಪಿಗಳು, ಅಚ್ಯುತ್‌ ಕುಮಾರ್‌ ಜೊತೆ ಸೇರಿ ಕೃತ್ಯ ಎಸಗುತ್ತಿದ್ದರು. ಮೂವರ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ. ಐಷಾರಾಮಿ ಜೀವನ ಕ್ಕಾಗಿ ಅವರು ಕೃತ್ಯ ಎಸಗುತ್ತಿದ್ದರು. ಆರೋಪಿ ಶಿವರಾಜ್‌, ಪ್ರಕರಣವೊಂದರ ವಿಚಾರಣೆಗೆ ನ್ಯಾಯಾಲಯಕ್ಕೆ ಗೈರಾಗುತ್ತಿದ್ದ. ಆತನ ಬಂಧನಕ್ಕೆ ವಾರಂಟ್ ಸಹ ಇತ್ತು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.