ಪೊಲೀಸರ ‘ಕಾಲಮಿತಿ’ ಆದೇಶ ರದ್ದು!

7

ಪೊಲೀಸರ ‘ಕಾಲಮಿತಿ’ ಆದೇಶ ರದ್ದು!

Published:
Updated:

ಬೆಂಗಳೂರು: ರಾಜ್ಯದ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ನಿಗದಿ ಮಾಡಲಾಗಿದ್ದ ಐದು ವರ್ಷಗಳ ಸೇವಾವಧಿ ಕಾಲಮಿತಿಯನ್ನು ರದ್ದುಗೊಳಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಈ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಬಹುಮುಖ್ಯ ಆದೇಶವೊಂದನ್ನು ಹಿಂಪಡೆದಿದ್ದಾರೆ.

ಕಮಿಷನರೇಟ್‌ ವ್ಯಾಪ್ತಿಯ ಅಧಿಕಾರಿಗಳಿಗೆ ಐದು ವರ್ಷ ಸೇವಾವಧಿ ನಿಗದಿಪಡಿಸಿ ನಿಯಮ ಜಾರಿಗೆ ತಂದಿದ್ದ ಕಾಂಗ್ರೆಸ್ ಸರ್ಕಾರ, ಆ ಮೂಲಕ ಹಲವು ವರ್ಷಗಳಿಂದ ಒಂದೇ ಕಡೆ ಬೀಡುಬಿಟ್ಟಿದ್ದವರ ಕಾರ್ಯಸ್ಥಾನವನ್ನು ಬದಲಾಯಿಸಿತ್ತು. ವರ್ಗವಾದ ಅಧಿಕಾರಿಗಳು ಮತ್ತೆ ಕಮಿಷನರೇಟ್ ವ್ಯಾಪ್ತಿಗೆ ಬರಲು ‘ಗಾಡ್‌ಫಾದರ್‌’ಗಳ ಮೂಲಕ ನಿರಂತರವಾಗಿ ಲಾಬಿ ನಡೆಸುತ್ತಿದ್ದರು.

ಇದೀಗ ಆ ಲಾಬಿ ಫಲ ಕೊಟ್ಟಂತಾಗಿದ್ದು, ಹಳಬರ ದಂಡು ಮತ್ತೆ ಕಮಿಷನರೇಟ್ ವ್ಯಾಪ್ತಿಗೆ ಬರಲು ಬಾಗಿಲು ತೆರೆದಂತಾಗಿದೆ. ‘ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅನುಭವಿ ಅಧಿಕಾರಿಗಳ ಅಗತ್ಯವಿದೆ. ಹಾಗಾಗಿ ಹಿಂದಿನ ನಿಯಮವನ್ನು ಹಿಂಪಡೆಯಲಾಗಿದೆ’ ಎಂದು ಸರ್ಕಾರ ಆದೇಶದಲ್ಲಿ ಹೇಳಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !